ಒಡಿಶ್ಸಾದ ಭುವನೇಶ್ವರದಲ್ಲಿ ಅ.10 ರಿಂದ 14 ರವರೆಗೆ ನಡೆಯುವ 40ನೇ ನ್ಯಾಷನಲ್ ಜೂನಿಯರ್ ಅಥ್ಲೆಟಿಕ್ ಚ್ಯಾಂಪಿಯನ್ ಶಿಪ್-2025ರ ಕ್ರೀಡಾಕೂಟಕ್ಕೆ ಶಿವಮೊಗ್ಗ ಜಿಲ್ಲೆಯ ವಸತಿಶಾಲೆ/ಕ್ರೀಡಾಶಾಲೆಯ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಸಂಜಯ್ ಸುನೀಲ್ ಹಂಚಿನಮನೆ -60 ಮೀ ಓಟ ಹಾಗೂ ಮಿಡ್ಲ್ ರಿಲೇ, ಶರತ್ ಕೆ.ಜೆ.- 600 ಮೀ ಓಟ ಮತ್ತು ಮಿಡ್ಲ್ ರಿಲೇ, ಸಚಿನ್ ಎಲ್.ಜೆ.-60 ಮೀ ಓಟ, ಸಿರಿ ಕೆ.ಜೆ.-80 ಮೀ ಹರ್ಡಲ್ಸ್, ಆರ್ಯನ್ ಮತ್ತು ಅನ್ವಿತ ಎಂ.ಆರ್ –ಎತ್ತರ ಜಿಗಿತ ಕ್ರೀಡೆಗಳಿಗೆ ಆಯ್ಕೆಯಾದ ಕ್ರೀಡಾಪಟುಗಳು. ಇವರುಗಳು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ನಿಲಯದ ಅಥ್ಲೆಟಿಕ್ ತರಬೇತುದಾರ ಬಾಳಪ್ಪ ಮಾನೆಯವರಿಂದ ತರಬೇತಿ ಪಡೆಯುತ್ತಿದ್ದಾರೆ.
ಆಯ್ಕೆಯಾದ ಕ್ರೀಡಾಪಟುಗಳಿಗೆ ಜಿಲ್ಲಾಧಿಕಾರಿಗಳು, ಕ್ರೀಡಾ ಇಲಾಖೆಯ ರೇಖ್ಯಾ ನಾಯ್ಕ, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ವರ್ಗದವರು ಶುಭ ಕೋರಿದ್ದಾರೆ.