
ಶಿವಮೊಗ್ಗ ನಗರದಾದ್ಯಂತ ಭೂಗತ ಕೇಬಲ್‌ಗಳನ್ನು ಅಳ ವಡಿಸಿದ್ದರೂ ವಿದ್ಯುತ್ ಕಂಬ ಗಳನ್ನು ತೆರವು ಮಾಡದೇ ಇರು ವುದನ್ನು ಖಂಡಿಸಿ ತಕ್ಷಣವೇ ತೆರವು ಮಾಡುವಂತೆ ಒತ್ತಾಯಿಸಿ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಇದಕ್ಕೆ ಸಂಬAಧಿಸಿದAತೆ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿ ಗಳು ಮತ್ತು ಮೇಸ್ಕಾಂ ಅಧಿಕಾರಿ ಗಳ ಸಭೆ ಕರೆಯದಿರುವುದನ್ನು ಖಂಡಿಸಿ ತಕ್ಷಣ ಸಭೆ ಕರೆಯಲು ಈ ಪ್ರತಿಭಟನೆ ಮಾಡ ಲಾಯಿತು.
ಮೆಸ್ಕಾಂ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ಸುಮಾರು ೩೦೦ ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ನಗರದಾದ್ಯಂತ ಭೂಗತ ಕೇಬಲ್‌ಗಳನ್ನು ಅಳವಡಿಸಿ ಹಳೆಯ ವಿದ್ಯುತ್ ಕಂಬಗಳನ್ನು ತೆಗೆದುಹಾಕದೆ ಹಾಗೆಯೇ ಬಿಟ್ಟಿರುವುದರಿಂದ ರಸ್ತೆಗಳ ಎರಡು ಬದಿಗಳಲ್ಲಿ ವಿದ್ಯುತ್ ಕಂಬಗಳಿದ್ದು ವಾಹನ ಸಂಚಾರಕ್ಕೆ ಮತ್ತು ಪಾರ್ಕಿಂಗ್ ವ್ಯವಸ್ಥೆಗೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿದರು.
ಕೂಡಲೇ ಈ ವಿಷಯದ ಬಗ್ಗೆ ಸಭೆಗೆ ದಿನಾಂಕ ನಿಗಧಿ ಪಡಿಸಬೇಕು, ಇಲಾಖೆಯು ಹಳೆಯ ವಿದ್ಯುತ್ ಕಂಬಗಳನ್ನು ತೆಗೆದು ಹಾಕಲು ಸಂಪೂರ್ಣ ವೇಳಾಪಟ್ಟಿಯನ್ನು ನೀಡುವಂತೆ ಒತ್ತಾಯಿಸಲಾಯಿತು.
ಸಮಸ್ಯೆ ಬಗೆಹರಿಯುವವರೆಗೆ ನಾಗರೀಕ ವೇದಿಕೆಯಿಂದ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ವೇದಿ ಕೆಯ ಪ್ರಮುಖರಾದ ಕೆ.ವಿ. ವಸಂತ್‌ಕುಮಾರ್, ಡಾ ಸತೀಶ್ ಕುಮಾರ್ ಶೆಟ್ಟಿ, ಎಸ್.ಬಿ. ಅಶೋಕ್ ಕುಮಾರ್, ಸೀತಾ ರಾಮ್, ಜನಮೇಜಿರಾವ್, ಡಾ. ಶ್ರೀನಿವಾಸ್, ಸ್ವಾಮಿ, ನಾಗ ರಾಜ್, ಚನ್ನವೀರಪ್ಪ ಗಾಮನ ಗಟ್ಟಿ, ಪುಷ್ಪಾಶೆಟ್ಟಿ, ವಾತ್ಸಲ್ಯ ಶೆಟ್ಟಿ, ಶೃತಿ ಶೆಟ್ಟಿ ವಿಜಯ ಶೆಟ್ಟಿ (ಮಂದಾರ)ಸುನಿತಾ P ಶೆಟ್ಟಿ, ಪುಷ್ಪಲತಾ ಶೆಟ್ಟಿ, ಸುಜಾತಾ ಶೆಟ್ಟಿ, ಗೀತಾ ಶೆಟ್ಟಿ, ಪ್ರೇಮಶೆಟ್ಟಿ, ನಂದಿನಿ, ಭಾರತಿ ಶೆಟ್ಟಿ ಮಂಜುನಾಥ್ ಶೆಟ್ಟಿ ಉಪಸ್ತಿತರಿದ್ದರು.