ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ ಶೀಟರ್ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ ಜೈಲಿನಲ್ಲಿ ತನ್ನ ಸಹಚಾರರ ಜೊತೆಗೆ ಬೃಹತ್ ಗಾತ್ರದ ಕೇಕ್ ಕತ್ತರಿಸಿಕೊಂಡು ಸೆರೆಮನೆಯಲ್ಲಿ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ.
ಅಲ್ಲದೆ ಅದನ್ನು ತನ್ನ ಮೊಬೈಲ್ ನಲ್ಲಿ ಬರ್ತಡೇ ಪಾರ್ಟಿಯ ವಿಡಿಯೋ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದು ಅದರ ಫೋಟೋ ವಿಡಿಯೋ ವೈರಲ್ ಆಗಿದೆ.
ರೌಡಿಶೀಟರ್ ಸೀನಾ ವಿರುದ್ಧ ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಪ್ರಕರಣದಲ್ಲಿ ಬೆಂಗಳೂರು ಕಾರಾಗೃಹದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ.
ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ದೊಡ್ಡ ಕೇಕು ಸೇಬಿನ ಹಾರ ಮೊಬೈಲ್ ಜೈಲು ಒಳಗಡೆ ತೆಗೆದುಕೊಂಡು ಹೋಗಲು ಜೈಲಾಧಿಕಾರಿಗಳ ಸಂಪೂರ್ಣ ಸಹಕಾರವಿರುತ್ತದೆ ಕಂಡು ಬಂದಿರುವುದರಿಂದ ಜೈಲ್ ಎಡಿಜಿಪಿ ದಯಾನಂದ್ ಅವರು ಇಲಾಖೆ ತನಿಖೆಯ ಬಳಿಕ 7 ಜನ ಅಧಿಕಾರಿಗಳನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.