ನವೆಂಬರ್ 01 ಕನ್ನಡ ರಾಜ್ಯೋತ್ಸವದ ದಿನದ ಅಂಗವಾಗಿ ಆಕಾಶವಾಣಿ ಭದ್ರಾವತಿ “ಕಾರ್ಡಿನಲ್ಲಿ ಕಥೆ” ಎಂಬ ವಿನೂತನ ಕಾರ್ಯಕ್ರಮವನ್ನು ನವೆಂಬರ್ ತಿಂಗಳಲ್ಲಿ ಹಮ್ಮಿಕೊಂಡಿದೆ. ಆಕಾಶವಾಣಿ ಕೇಳುಗರು ಅ.31ರೊಳಗಾಗಿ ಅಂಚೆಕಾರ್ಡಿನಲ್ಲಿ ಮುದ್ದಾದ ಅಕ್ಷರಗಳೊಂದಿಗೆ ಇತರರು ಓದುವಂತೆ ಕಳುಹಿಸಲು ಕಾರ್ಯಕ್ರಮದ ಮುಖ್ಯಸ್ಥ ಎಸ್.ಆರ್. ಭಟ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಆಯ್ದ ಕಥೆಗಳನ್ನು ನವೆಂಬರ್ ತಿಂಗಳಲ್ಲಿ ಪ್ರಸಾರ ಮಾಡಲಾಗುವುದು.