ಅಂತಾರಾಷ್ಟಿçÃಯ ಹವಾಮಾನ ಕ್ರಮ ದಿನದ ಅಂಗವಾಗಿ ಹುಲಿ-ಸಿಂಹಧಾಮ ತ್ಯಾವರೆಕೊಪ್ಪ ಹಾಗೂ ಪೇಸ್ ಪದವಿಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ನಗರದ ಅ.25 ಬೆಳಿಗ್ಗೆ 9 ಗಂಟೆಗೆ ತ್ಯಾವರೆಚಟ್ನಹಳ್ಳಿಯಲ್ಲಿರುವ ಪೇಸ್ ಪದವಿಪೂರ್ವ ಕಾಲೇಜಿನ ಆವರಣದಲ್ಲಿ 8, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.


ವನ್ಯಜೀವಿಗಳು ಮತ್ತು ಸಾಮಾನ್ಯ ಜ್ಞಾನದ ಕುರಿತು ರಸಪ್ರಶ್ನೆ, ಶಿವಮೊಗ್ಗ ಜಿಲ್ಲಾ ವನ್ಯಜೀವಿಗಳನ್ನು ಕುರಿತು ಚಿತ್ರಕಲೆ ಕೃತಕ ಬುದ್ದಿಮತ್ತೆ (ಎಐ) ಪೇಟಿಂಗ್, ಪರಿಸದ ಬದಲಾವಣೆಗೆ ಕಾರಣಗಳು ಮತ್ತು ಪರಿಹಾರೋಪಾಯಗಳು ಕುರಿತು ಪವರ್ ಪಾಯಿಂಟ್ ಪ್ರೆಸೆಂಟೆಶನ್, ಇತ್ತೀಚಿಗೆ ನಾಶವಾದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳ ಕುರಿತು ಪೋಸ್ಟರ್ ಮೇಕಿಂಗ್ & ಪ್ರೆಸೆಂಟೇಶನ್, ವಿಜ್ಞಾನದ ಮಾದರಿಗಳ ಪ್ರದರ್ಶನ, ಪ್ಲಾಸ್ಟಿಕ್, ಬಾಟಲ್, ಕಾರ್ಡ್ ಬೋರ್ಡ್, ನ್ಯೂಸ್‌ಪೇಪರ್, ನಾಣ್ಯ, ಸಿಡಿ, ಬಟ್ಟೆ ಇತ್ಯಾದಿಗಳನ್ನು ಬಳಸಿ ಬೆಸ್ಟ್ ಔಟ್ ಆಫ್ ವೇಸ್ಟ್ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು, ಈ ಸ್ಪರ್ಧೆಗೆ ಪ್ರತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳನ್ನೊಳಗೊಂಡ ಒಂದು ತಂಡಕ್ಕೆ ಮಾತ್ರ ಅವಕಾಶ.


ಕನ್ನಡ ಪರಿಸರ ಗೀತೆಯ ಕುರಿತು ಸುಗಮ ಸಂಗೀತ ಸ್ಪರ್ಧೆ, ಪರಿಸರವನ್ನು ಕುರಿತಂತೆ ಆಶುಭಾಷಣ ಸ್ಪರ್ಧೆ ಹಾಗೂ ಕೃತಕ ಬುದ್ದಿಮತ್ತೆ / ಮಾನವ ಬುದ್ದಿಮತ್ತೆ ಕುರಿತು ಪ್ರಬಂಧ ಸ್ಪರ್ಧೆ (ಕನ್ನಡದಲ್ಲಿ 2 ರಿಂದ 4 ಪುಟ ಮೀರದಂತೆ) ಹಮ್ಮಿಕೊಂಡಿದ್ದು, ಈ ಸ್ಪರ್ಧೆಗೆ ಪ್ರತಿ ಶಾಲೆಯಿಂದ ಒಬ್ಬ ವಿದ್ಯಾರ್ಥಿಗೆ ಮಾತ್ರ ಅವಕಾಶ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ: ಸಂಜಯ್-8088991234, ಸುನೀಲ್‌ದತ್ ಜೋಶಿ-9900631508 ಹಾಗೂ www.pacepuc.com ಗೆ ಸಂಪರ್ಕಿಸಬಹುದೆAದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *