ಛಾಯಾಗ್ರಹಣಕ್ಕಿರುವ ಸಾಮಾರ್ಥ್ಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಪದಗಳಲ್ಲಿ ವರ್ಣಿಸಲು ಸಾಧ್ಯವಿರದ ಎಷ್ಟೋ ಸಂಗತಿಗಳನ್ನು ಛಾಯಾಚಿತ್ರದಲ್ಲಿ ಸೆರೆಹಿಡಿಯಬಹುದು ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ ಹೇಳಿದರು.
ವಿಶ್ವ ಛಾಯಾಗ್ರಾಹಕರ ದಿನದ ಪ್ರಯುಕ್ತ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರಿಗೆ ಸನ್ಮಾನಿಸಿ ಮಾತನಾಡಿದರು.
ಛಾಯಾಗ್ರಾಹಕರ ಯೋಚನೆಗಳನ್ನು ಹಂಚಿಕೊಳ್ಳಲು, ಪ್ರೋತ್ಸಾಹಿಸುವ ಮೂಲಕ ಹಾಗೂ ಮುಂದಿನ ಪೀಳೀಗೆಗೆ ತಜ್ಞರ ಅನುಭವ, ತಾಂತ್ರಿಕ ಕೌಶಲ್ಯಗಳು ಹಾಗೂ ಪ್ರೇರಣೆ ನೀಡುವ ಉದ್ದೇಶದಿಂದ ಪ್ರತಿ ವರ್ಷ ಛಾಯಗ್ರಾಹಕರ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ನಾಗರಾಜ್ ಅವರು ವನ್ಯಜೀವಿ ಛಾಯಾಗ್ರಾಹಕರಾಗಿ ಅದ್ಭುತ ಫೋಟೋಗ್ರಾಫಿ ಮಾಡುತ್ತಾರೆ. ವನ್ಯಜೀವಿ ರಕ್ಷಣೆ, ಪರಿಸರ ರಕ್ಷಣೆ ಹಾಗೂ ವಿವಿಧ ವಿಷಯಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದು, ಕನ್ನಡ ಪರಿಷತ್ ಹಾಗೂ ಅನೇಕ ಹೆಸರಾಂತ ಸಂಘ ಸಂಸ್ಥೆಗಳಲ್ಲಿ ಅವರ ಸೇವೆ ಸ್ಮರಿಸಬಹುದು ಎಂದರು.
ವಿಶ್ವ ಛಾಯಾಗ್ರಾಹಕರ ದಿನಾಚರಣೆಯ ಪ್ರಯುಕ್ತ ಪತ್ರಿಕಾ ಛಾಯಾಗ್ರಾಹಕ ಹಾಗೂ ಅಂತರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಚಿನ್ನ ಬೆಳ್ಳಿ ಸೇರಿದಂತೆ ಇತರೆ ಪ್ರಶಸ್ತಿಗೆ ಭಾಜನರಾಗಿರುವ ಶಿವಮೊಗ್ಗ ನಾಗರಾಜ್ ಅವರಿಗೆ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ ಸನ್ಮಾನಿಸಲಾಯಿತು.
ನಾಗರಾಜ್ ಅವರು ಬಾಂಗ್ಲಾದೇಶ ಆಗಿಲೆ ಫೋಟೋಗ್ರಫಿಕ್ ಸೋಸೈಟಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಆನರಬಲ್ ಮೆನ್ಷನ್ ಗೌರವ ಸೇರಿದಂತೆ ಅಮೆರಿಕದ ನ್ಯೂಯಾರ್ಕ್, ನಾರ್ತ್ ಮೆಸಿಡೋನಿಯಾ ಸೇರಿ ಅನೇಕ ರಾಷ್ಟಗಳಲ್ಲಿ ಇವರ ಛಾಯಾಚಿತ್ರಗಳು ಪ್ರದರ್ಶನಗೊಂಡಿದೆ ಎಂದರು.
ದೆಹಲಿಯ ವೈಲ್ಡ್ ಲೈಫ್ ಫೋಟೋಗ್ರಫಿ ಅಸೋಶಿಯೇಶನ್ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಚಿನ್ನ ಬೆಳ್ಳಿ ಸೇರಿ ಇತರ ಪ್ರಶಸ್ತಿಗಳು ಲಭಿಸಿವೆ. ಅಂತರಾಷ್ಟಿಯ ಪ್ರಶಸ್ತಿಗಳು ವೆಸ್ಟ್ ಬೆಂಗಾಲ್‌ನ ವಿಬ್ರಂಟ್ ಕಲರ್ ನ್ಯಾಷನಲ್ ಡಿಜಿಟಲ್ ಸರ್ಕ್ಯೂಟ್ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯ ಡೈಲಿ ಲೈಫ್ ವಿಭಾಗದಲ್ಲಿ ಬೆಸ್ಟ್ ಸ್ಟೋರಿ ಅವಾರ್ಡ್ ಚಿನ್ನದ ಪದಕ ಹಾಗೂ ವಿ.ಸಿ ಮೆರಿಟ್ ಅವಾರ್ಡ್ ಹಾಗೂ ರಾಷ್ಟಿಯ ಪಿಚ್ಚರ್ ಕ್ಯೂಬ್ ಆರ್ಟ್ ಕ್ಲಬ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಪಿ.ಎ.ಸಿ ಚಿನ್ನದ ಪದಕಕ್ಕೆ ಭಾಜನರಾಗಿರುತ್ತಾರೆ.
ರೋಟರಿ ವಲಯ ಸಹಾಯಕ ಮಾಜಿ ಗವರ್ನರ್ ಜಿ.ವಿಜಯ್ ಕುಮಾರ್, ರೋಟರಿ ಮಾಜಿ ಅಧ್ಯಕ್ಷ ಕೆ.ಜಿ.ರಾಮಚಂದ್ರರಾವ್, ರೋಟರಿ ಜಿಲ್ಲಾ ಸಂಪಾದಕ ವಸಂತ್ ಹೋಬಳಿದಾರ್ ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ