ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದು ಹೋದ ಮೊಬೈಲ್ ಗಳನ್ನು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಯವರು CEIR Portal ಮೂಲಕ ಪತ್ತೆ ಹಚ್ಚಿದ್ದು, ಸದರಿ ಮೊಬೈಲ್ ಫೋನ್ ಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮಿಥುನ್ ಕುಮಾರ್ ಜಿ. ಕೆ. ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು ಜಿಲ್ಲೆಯಾದ್ಯಂತ ಇದುವರೆಗೂ ಸುಮಾರು 6445 ಕಳೆದು ಹೋದ ಮೊಬೈಲ್ ಗಳು ವರದಿಯಾಗಿದ್ದು, ಇವುಗಳಲ್ಲಿ ದೇಶದ ವಿವಿಧ ರಾಜ್ಯಗಳಾದ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕೇರಳ ಮತ್ತು ತೆಲಂಗಾಣ ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪತ್ತೆ ಮಾಡಿ ಸುಮಾರು 1194 ಕ್ಕೂ ಹೆಚ್ಚು ಮೊಬೈಲ್ ಗಳನ್ನು ವಾರಸುದಾರರಿಗೆ ನೀಡಿದ್ದು, ನಂತರ ಇದೆ ರೀತಿ ಕಳೆದ 02 ತಿಂಗಳಲ್ಲಿ 110 ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಿರುತ್ತಾರೆ.

ಪೊಲೀಸ್ ಅಧೀಕ್ಷಕರು ಸದರಿ ಫೋನ್ ಗಳನ್ನು ವಾರಸುದಾರರಿಗೆ ಹಿಂದಿರುಗಿಸಿ ನೀಡಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರ ಕುರಿತು ಈ ಕೆಳಕಂಡಂತೆ ಮಾತನಾಡಿರುತ್ತಾರೆ.

1) ಮೊಬೈಲ್ ಫೋನ್ ಎಂಬುದು ಈ ದಿನಗಳಲ್ಲಿ ಮನುಷ್ಯ ನ ಒಂದು ಭಾಗವೇ ಆಗಿದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ಎಲ್ಲರೂ ಸಹಾ ಮೊಬೈಲ್ ಫೋನ್ ಅನ್ನು ಉಪಯೋಗಿಸುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಯಾರೇ ಆಗಲಿ ಬೆಳ್ಳಿಗೆ ಎದ್ದ ಕೂಡಲೇ ದೇವರ ಮುಖವನ್ನು ನೋಡುವ ಬದಲು ಸಾಮಾಜಿಕ ಜಾಲತಾಣವನ್ನು ವೀಕ್ಷಿಸುತ್ತಾರೆ.

2) ಸಹಜವಾಗಿ ನಿಮಗೆಲ್ಲ ಕಿವಿಮಾತು ಹೇಳುವುದಾದರೆ ನಿಮ್ಮ ಮೋಬೈಲ್ ಫೋನ್ ಕಳೆದು ಹೋದಾಗ ನೀವು ಜಾಗರೂಕರಾಗಿರದೇ ಹೋದಲ್ಲಿ, ಈ ರೀತಿ ಕಳೆದು ಹೋಗಿರುವ ಮೊಬೈಲ್ ನ ಸಿಮ್ ಕಾರ್ಡ್ ಅನ್ನುಉಪಯೋಗಿಸಿಕೊಂಡು ಬೇರೆ ಬೇರೆ ರೀತಿಯ ಸೈಬರ್ ಅಪರಾದವನ್ನು ಮಾಡುವ ಸಾದ್ಯತೆ ಹೆಚ್ಚಾಗಿರುತ್ತದೆ. ಆದುದರಿಂದ ತಾವೆಲ್ಲರೂ ಕೂಡ ಜಾಗೂರಕರಾಗಿರಬೇಕು.

3) ನಿಮ್ಮ ಬೆಲೆ ಬಾಳುವ ವಸ್ತುಗಳಾದ ಚಿನ್ನಾಭರಣಗಳು ಯಾವ ರೀತಿ ಜೋಪಾನವಾಗಿ ಇಡುತ್ತೀರೋ, ಅದೇ ರೀತಿ ರೀತಿಯಲ್ಲಿ ಮೋಬೈಲ್ ಅನ್ನು ಜಾಗೂರಕತೆಯಿಂದ ಇಟ್ಟು ಕೊಳ್ಳಬೇಕು, ಕೆಲವೊಂದು ಸೇಪ್ಟಿ ಅಪ್ಲೀಕೇಷನ್ ಗಳನ್ನು ಉಪಯೋಗಿಸಿಕೊಂಡಲ್ಲಿ, ಅದರ ಮುಖಾಂತರ ಮೊಬೈಲ್ ಅನ್ನು ಟ್ರೇಸ್ ಮಾಡಲು ಅನೂಕುಲವಾಗುತ್ತದೆ.

4) ಮೊಬೈಲ್ ಫೋನ್ ನಲ್ಲಿ ಲೋಕೆಷನ್ ಆನ್ ಮಾಡಿಕೊಂಡಿದ್ದಲ್ಲಿ ಮೊಬೈಲ್ ಕಳೆದು ಹೋದ ಸಂದರ್ಭದಲ್ಲಿ ಮೊಬೈಲ್ ಎಲ್ಲಿದೆ ಎಂದು ಗೊತ್ತಾಗುತ್ತದೆ. ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ತಕ್ಷಣವಾಗಿ ಮೊಬೈಲ್ ಅನ್ನು ಬ್ಲಾಕ್ ಮಾಡಿಸಿಬೇಕು ಇಲ್ಲ ಅಂದರೆ ನಿಮ್ಮ ನಂಬರ್ ಅನ್ನು ಉಪಯೋಗಿಸಿಕೊಂಡು ಸೈಬರ್ ಅಪರಾದವನ್ನು ಮಾಡಿದರೆ, ಅದು ನಿಮ್ಮ ಮೇಲೆ ಬರುವ ಸಾದ್ಯತೆ ಇರುತ್ತದೆ.

5) ಮೊದಲೇ ನೀವು ಮೊಬೈಲ್ ಅನ್ನು ಕಳೆದುಕೊಂಡಿರುತ್ತಿರಿ, ಮತ್ತು ಸೈಬರ್ ಅಪರಾದದಿಂದ ಇನ್ನೊಮ್ಮೆ ನಿಮ್ಮ ಮೇಲೆನೇ ಸೈಬರ್ ಅಪರಾದ ಬರುತ್ತದೆ ಹಾಗೂ ನಿಮ್ಮ ವೈಯುಕ್ತಿಕ ಮಾಹಿತಿಯನ್ನು ಬಳಸಿಕೊಂಡು ಲಕ್ಷಾಂತರ ರೂಪಾಯಿ ಕಳೆದುಕೊಳುತ್ತೀರಿ.

6) ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಇದೇ ರೀತಿಯಾದ ಪ್ರಕರಣ ದಾಖಲಾಗಿರುತ್ತದೆ. ವ್ಯಕ್ತಿಯೊಬ್ಬರು ಯಾವುದೋ ಕಂಪನಿಯಲ್ಲಿ ಹೂಡಿಕೆ ಮಾಡುವ ಸಲುವಾಗಿ ಒಂದು ಅಪ್ಲೀಕೇಷನ್ ಅನ್ನು ಡೌನಲೋಡ್ ಮಾಡಿ ಇದರಲ್ಲಿ ಹೂಡಿಕೆ ಮಾಡಿ, ಇನ್ನು ಹೆಚ್ಚಿನ ಹಣವನ್ನು ನೀಡುತ್ತೇವೆ ಎಂದು ಹೇಳಿ ಒಂದು ಹೊಸ ಬ್ಯಾಂಕ ಖಾತೆಯನ್ನು ಮಾಡಿಸಿ ಅದರ ಎಲ್ಲಾ ಮಾಹಿತಿಯನ್ನು ನಮಗೆ ಕೊಡಿ ಎಂದು ಕೇಳಿ ಪಡೆದು ಕೊಂಡಿದ್ದು, ಸದರಿ ವ್ಯಕ್ತಿಯು ಈ ರೀತಿಯಾಗಿ ಎಲ್ಲಾ ಮಾಹಿತಿಯನ್ನು ನೀಡಿದಾಗ ಹಣವನ್ನು ಕಳೆದುಕೊಂಡಿರುತ್ತಾರೆ.

7) ಮೊಬೈಲ್ ನಲ್ಲಿರುವ ನಿಮ್ಮ ಡೇಟಾ ಹಾಗೂ ನಿಮ್ಮ ಇ-ಮೇಲ್ ಪಾಸ್ ವರ್ಡ್ ಪಿನ್ ಒಟಿಪಿ ಬ್ಯಾಂಕ್ ಖಾತೆಯ ಮಾಹಿತಿಗಳನ್ನು ಯಾವುದೇ ರೀತಿಯಲ್ಲಿ ಕೂಡ ಯಾರಿಗೂ ಶೇರ್ ಮಾಡಬಾರದು.

8) ತೀರ್ಥಹಳ್ಳಿ ಯಲ್ಲಿಯೂ ಇದೇ ರೀತಿ ಬಿಟ್-ಕಾಯಿನ್ ನಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ನಿಮಗೆ ಲಾಭವನ್ನು ಕೋಡುತ್ತೇವೆ ಅಂತ ಆಸೆಗಳನ್ನು ಹುಟ್ಟಿಸಿರುತ್ತಾರೆ. ತುಂಬ ಜನ ಈಗಾಗಲೇ ಮೋಸ ಹೋಗಿರುತ್ತಾರೆ. ಈ ರೀತಿಯಾಗಿ ವಿವಿಧ ಫ್ರಾಡ್ ಸ್ಕೀಮ್ ಇರುತ್ತದೆ.

9) ಆರ್.ಬಿ.ಐ / ಸರ್ಕಾರದಿಂದ ಯಾವುದು ಅಧೀಕೃತವಾಗಿರತ್ತದೆಯೋ ಅಥವಾ ಸರ್ಕಾರಿ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್ ನಿಂದ ಇರುತ್ತದೆಯೂ ಅದರಲ್ಲಿ ಮಾತ್ರ ಹೂಡಿಕೆ ಮಾಡಬೇಕು.* ಸ್ಟಾಕ್ ನಲ್ಲಿ ಹೂಡಿಕೆ ಮಾಡುವಾಗ ಕೂಡ ಯಾವ ಪರಿಚಿತ ಅಪ್ಲಿಕೇಷನ್ ಇರುತ್ತವೆಯೋ ಅದರಲ್ಲಿ ಮಾತ್ರ ನೀವು ಹೂಡಿಕೆ ಮಾಡಬೇಕು.


10) ಈಗ ಒಂದು ಹೊಸ ಟ್ರೆಂಡ್ ಶುರುವಾಗಿದ್ದು ವಾಟ್ಸ್ ಅಪ್ ನಲ್ಲಿ ಹೂಡಿಕೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಎಂದು ಹೇಳಿ ಗ್ರೂಪ್ ಗೆ ಸೇರಿಸಿಕೊಂಡು ನಿಮಗೆ ಕೆಲವೊಂದು ಸ್ಟಾಕ್ ಗೆ ಹಣವನ್ನು ಹೂಡಿಕೆ ಮಾಡಿ ಹಾಗೂ ಕೆಲವೊಂದು ಅಪ್ಲಿಕೇಷನ್ ಅನ್ನು ಹಾಕಿಕೊಂಡು ಅದರಲ್ಲಿ ಹೂಡಿಕೆ ಮಾಡಿ ಎಂದು ಡೌನಲೋಡ್ ಮಾಡಿಸಿರುತ್ತಾರೆ. ಅದು ಫೇಕ್ ಅಪ್ಲೇಕೆಷನ್ ಆಗಿರುತ್ತದೆ.

11) ನೀವು ಪ್ರಾಥಮಿಕವಾಗಿ ನಿಮ್ಮ ಮೊಬೈಲ್ ಸುರಕ್ಷತೆ ಗಾಗಿ ನಿಮ್ಮ ಮೊಬೈಲ್ ಗೆ ಪಿನ್ ಇಟ್ಟುಕೊಳ್ಳಬೇಕು ಹಾಗೂ ಫಿಂಗರ್ / ಬಯೋಮೆಟ್ರಿಕ್ ಅನ್ನು ಇಟ್ಟುಕೊಳ್ಳಬೇಕು ಹಾಗೂ *ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಗಳನ್ನು ಯಾರಿಗೂ ಶೇರ್ ಮಾಡಬಾರದು. ಎಂದು ತಿಳಿಸಿರುತ್ತಾರೆ.

ಈ ಸಂದರ್ಭದಲ್ಲಿ, ಶ್ರೀ ಎ.ಜಿ.ಕಾರಿಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಶಿವಮೊಗ್ಗ ಜಿಲ್ಲೆ, ಮತ್ತು ಶ್ರೀ ರಮೇಶ್ ಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-02 ಶಿವಮೊಗ್ಗ ಜಿಲ್ಲೆ, ಶ್ರೀ ಕೃಷ್ಣ ಮೂರ್ತಿ ಡಿ.ವೈ.ಎಸ್.ಪಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಹಾಗೂ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *