ಆಶ್ವಥ್ ನಗರದ ಐದನೇ ತಿರುವಿನಲ್ಲಿರುವ ಹೊಮ್ಮರಡಿ ಕುಟುಂಬಕ್ಕೆ ಸೇರಿದ್ದ ಸಾನಿಧ್ಯ ಎಂಬ ಮನೆಯಲ್ಲಿ ಡಾ.ಜಯಶ್ರೀ ಮತ್ತು ಪುತ್ರ ಆಕಾಶ್ ನೇಣಿಗೆ ಶರಣಾಗಿದ್ದಾರೆ. ಡಾ.ಜಯಂತಿ ಉಷಾ ನರ್ಸಿಂಗ್ ಎದುರಿನ ಹೊಮ್ಮಡಿ ನರ್ಸಿಂಗ್ ಹೋಂ ನಡಸುತ್ತಿದ್ದರು.

ಐದು ತಿಂಗಳ ಹಿಂದಷ್ಟೆ ಆಕಾಶ್ ಎರಡನೇ ಮದುವೆಯಾಗಿದ್ದರು. ಈ ಹಿಂದೆಯಿದ್ದ ಮೊದಲನೇ ಹೆಂಡತಿ ಸಹ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಾದ ಬಳಿಕ ಎರಡನೇ ಮದುವೆಯಾಗಿ ಐದು ತಿಂಗಳ ನಂತರ ಆಕಾಶ್ ಸಹ ಈಗ ನೇಣು ಬಿಗಿದುಕೊಂಡಿದ್ದಾರೆ. ಎರಡು ಪ್ರತ್ಯೇಕ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಡೆತ್ ನೋಟ್ ಬರೆದು ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ನಲ್ಲಿ ಏನು ಬರೆದಿದೆ ಎಂಬುದು ಬಹಿರಂಗವಾಗಬೇಕಿದೆ. ಡಾ.ನಾಗರಾಜ್ ಹೊಮ್ಮರಡಿ ಸಹ ಈ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಮೊದಲನೆ ಸೊಸೆ ನಿವ್ಯಶ್ರೀ ಈಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದರು.

ಎರಡನೇ ಹೆಂಡತಿ ನಿವ್ಯ ಎಂಬುವರು ಸಹ ಮದುವೆಯಾಗಿ ವರ್ಷದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೊದಲನೇ ಸೊಸೆ ಆತ್ಮಹತ್ಯೆ ಶಾಕ್ ನಿಂದ ಡಾ.ಜಯಶ್ರೀ ಹೊರಗೆ ಬಂದಿಲ್ಲ ಎಂದು ಹೇಳಲಾಗುತ್ತಿದೆ. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಆಕಾಶ್ ತಾಯಿಗೆ ಹಣ ಕೇಳಿದ್ದಾರೆ ಎಂಬ ಕಾರಣಕ್ಕೆ ಜಗಳವಾಗಿತ್ತು ಎನ್ನಲಾಗಿದೆ. ಮೂರು ಕೊಠಡಿಯಲ್ಲಿ ಪ್ರತ್ಯೇಕವಾಗಿದ್ದ ಅತ್ತೆ, ಸೊಸೆ ಮತ್ತು ಮಗ ಬೆಳಿಗ್ಗೆ ಬಾಗಿಲು ತೆರೆದಿರಲಿಲ್ಲ. ನಂತರ ತಡವಾಗಿ ಎದ್ದ ಸೊಸೆ ಗಂಡನ ತಂಗಿದೆ ಕರೆ ಮಾಡಿದ್ದಾರೆ. ತಂಗಿ ಬಂದು ನೋಡಿದಾಗ ಗಂಡ ನೇಣಿಗೆ ಶರಣಾಗಿದ್ದಾರೆ. ನಂತರ ತಾಯಿಯೂ ಬೇರೆ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಹೊತ್ತಿಗೆ ಆದ ಆತ್ಮಹತ್ಯೆ ಮಧ್ಯಾಹ್ನದ ಹೊತ್ತಿಗೆ ವಿನೋಬ ನಗರ ಪೊಲೀಸರಿಗೆ ತಿಳಿದು ಬಂದಿದೆ. ಶವವನ್ನ ಶವಗಾರಕ್ಕೆ ಸಾಗಿಸಲಾಗಿದೆ. ಈ ಹೊಮ್ಮರಡಿ ಕುಟುಂಬ ನ್ಯಾಮತಿಯ ಮೂಲವಾಸಿಗಳಾಗಿದ್ದಾರೆ.

Leave a Reply

Your email address will not be published. Required fields are marked *