ರೋಟರಿ 3182 ಜಿಲ್ಲಾ ಕ್ರೀಡಾಕೂಟವು ಮಲೆನಾಡ ಕ್ರೀಡೋತ್ಸವದ ಶಿವಮೊಗ್ಗದ ಸಾಗರ ರಸ್ತೆ ಪಿಎಸ್ ಕಾಲೇಜ್ ಕ್ರೀಡಾಂಗಣ ಹಾಗೂ ನೇರು ಕ್ರೀಡಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಲ್ಪಟ್ಟಿತು. ಈ ಕ್ರೀಡಾಕೂಟದಲ್ಲಿ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ 85 ರೋಟರಿ ಕ್ಲಬ್‌ಗಳು ಭಾಗವಹಿಸಿದ್ದವು. ವಿವಿಧ ಜೋನಲ್ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳು ಈ ಜಿಲ್ಲಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದು, ಉತ್ಸಾಹಭರಿತ ಹಾಗೂ ಸ್ಪರ್ಧಾತ್ಮಕ ವಾತಾವರಣದಲ್ಲಿ ಕ್ರೀಡಾಕೂಟ ನಡೆಯಿತು.
ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ತಂಡವು ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.
ವಿನುತ ಅಶ್ವಿನ್, ದೀಪಾ ಶೆಟ್ಟಿ, ತಸ್ಯಾ ಶೆಟ್ಟಿ, ಮುತ್ತಣ್ಣ, ಮಥುರ ಧನಂಜಯ, ಗೌರಿ, ಶುಭಾ ಚಿದಾನೆಂದೆ, ರಾಜೇಶ್ವರಸಿಂಗ್, ಚೈತ್ರ ಸ್ಪಂದನ ಹಾಗೂ ಧರ್ಮೇಂದ್ರ ಸಿಂಗ್ ಅವರು ವಿವಿಧ ವಿಭಾಗಗಳಲ್ಲಿ ಪದಕಗಳನ್ನು ಗೆದ್ದು ಕ್ಲಬ್‌ಗೆ ಕೀರ್ತಿ ತಂದಿದ್ದಾರೆ.
ಪದಕ ವಿಜೇತರಾದ ಎಲ್ಲರಿಗೂ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.ಜೊತೆಗೆ, ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳ ಪರಿಶ್ರಮ, ಶಿಸ್ತು ಹಾಗೂ ಕ್ರೀಡಾತ್ಮಕ ಮನೋಭಾವವನ್ನು ಕ್ಲಬ್ ಗೌರವಪೂರ್ವಕವಾಗಿ ಅಭಿನಂದಿಸಿದರು.