ನಾಡಿನ ಖ್ಯಾತ ಸಾಹಿತಿ, ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಭಾರತಿ ವಿಭಾಗದ ಪ್ರಾಧ್ಯಾಪಕರಾದ ಪ್ರ.ಜಿ. ಪ್ರಶಾಂತ ನಾಯಕ ಇವರಿಗೆ ಡಾ.ಎಂ.ಎಂ.ಕಲಬುರ್ಗಿ-ರಾಷ್ಟ್ರೀಯ ಸಂಶೋಧನಾ ಸಾಹಿತ್ಯ ಪುರಸ್ಕಾರ, ಕ್ರಾಂತಿದೀಪ ಪತ್ರಿಕೆಯ ಸಂಪಾದಕರಾದ ಎನ್.ಮಂಜುನಾಥ್ ಇವರಿಗೆ ಡಿ.ವಿ.ಗುಂಡಪ್ಪ-ರಾಷ್ಟ್ರೀಯ ಮಾಧ್ಯಮ ಪುರಸ್ಕಾರ ಹಾಗೂ ದೀನಬಂಧು ಸೇವಾಟ್ರಸ್ಟ್ ಅಧ್ಯಕ್ಷರಾದ ಎಂ.ರಮೇಶ್ ಶೆಟ್ಟಿ ಶಂಕರಘಟ್ಟ ಇವರು ಸಮಾಜಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪ್ರತಿವರ್ಷದಂತೆ ಈ ವರ್ಷವು ನಾಡಿನ ಸಾಹಿತಿಗಳು ಹಾಗೂ ಸಮಾಜಸೇವಕರಿಗೆ ಪ್ರಸಸ್ತಿಯನ್ನು ಪ್ರಕಟಿಸಿತ್ತು. ಈ ಪ್ರಶಸ್ತಿಗಳನ್ನು ಇಂದು ಕುವೆಂಪು ವಿಶ್ವವಿದ್ಯಾನಿಲಯ ಬಸವ ಸಭಾಂಗಣದಲ್ಲಿ ನಡೆದ “ಅಖಿಲ ಕರ್ನಾಟಕ ಐದನೆಯ ಕವಿ-ಕಾವ್ಯ ಸಮ್ಮೇಳನ’ ಸಮಾರಂಭದಲ್ಲಿ ಪ್ರಧಾನ ಮಾಡಲಾಯಿತು.
ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಪಕರು, ಸಾಹಿತಿಗಳು ಆದ ಡಾ.ರಾಜೇಂದ್ರಚೆನ್ನಿ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿದ್ದರೆ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷರು ಹಾಗೂ ಸಾಹಿತಿ ಡಾ.ರಂಜಾನ್ ದರ್ಗಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್ ಉಪ್ಪಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಜಿಲ್ಲಾ ವೇದಿಕೆಯ ಅಧ್ಯಕ್ಷೆ ಡಾ.ಹಸೀನ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನಾಡಿನಿಂದ ನೂರಕ್ಕೂ ಹೆಚ್ಚು ಕವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *