ಡೆಲ್ಲಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಅನುಯಲ್ ಸ್ಪೋರ್ಟ್ಸ್ ಡೇ ಕಾರ್ಯಕ್ರಮಕ್ಕೆ ಅತಿಥಿಯಾಗಿ ರಾಜ್ಯ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕರಾದ ಜಿ.ಡಿ. ಮಂಜುನಾಥ್ ಅತಿಥಿಯಾಗಿ ಭಾಗವಹಿಸಿದ್ದರು.

ನಂತರ ಕಾರ್ಯಕ್ರಮ ಉದ್ದೇಶಸಿ ಮಾತನಾಡಿದ ಅವರು ಕ್ರೀಡೆ ಎಂದರೆ ಕೇವಲ ಮೈದಾನದಲ್ಲಿ ಓಡುವುದಲ್ಲ ಇದು ಜೀವನದ ದೊಡ್ಡ ಪಾಠಶಾಲೆ. “ಸದೃಢ ಕಾಯದಲ್ಲಿ ಸದೃಢ ಮನಸ್ಸಿರುತ್ತದೆ” ಎಂಬ ಮಾತಿನಂತೆ, ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಆಟೋಟಗಳು ಅತ್ಯಗತ್ಯ. ಕ್ರೀಡೆಯು ನಮಗೆ ಶಿಸ್ತು ಸಮಯ ಪ್ರಜ್ಞೆ ಮತ್ತು ಸೋಲನ್ನು ಸಮಾನವಾಗಿ ಸ್ವೀಕರಿಸುವ ದೊಡ್ಡ ಗುಣವನ್ನು ಕಲಿಸುತ್ತದೆ.
ಇಂದು ನೀವು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೀರಿ ಎಂದರು.

ಎಲ್ಲರೂ ಗೆಲ್ಲಲು ಸಾಧ್ಯವಿಲ್ಲದಿರಬಹುದು, ಆದರೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಬಹಳ ಮುಖ್ಯ. ಕ್ರೀಡೆಯಲ್ಲಿ ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳಿ. ಜಗತ್ತಿನ ಚಾಂಪಿಯನ್‌ಗಳು ಅಂತಿಮವಾಗಿ ಯಶಸ್ವಿಯಾಗುವವರೆಗೆ ಪ್ರಯತ್ನಿಸುತ್ತಲೇ ಇರುತ್ತಾರೆ ಎಂಬುದು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ಕ್ರೀಡಾಪಟುಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ವಿಶೇಷ ಅವಕಾಶಗಳಿದ್ದು ಸರ್ಕಾರ ಹೆಚ್ಚಿನ ಮಹತ್ವ ನೀಡುತ್ತಿದೆ. ಪೀಡೆಯಲ್ಲಿ ಸಕ್ರಿಯವಾಗಿ ತೋರಿಸಿ ತೊಡಗಿಸಿಕೊಂಡು ಸರ್ಕಾರದ ಕ್ರೀಡಾ ಕೋಟದಲ್ಲಿ ಹೆಚ್ಚಿನ ಅವಕಾಶ ಪಡೆದುಕೊಳ್ಳಿ.
ಮೈದಾನದಲ್ಲಿ ನೀವು ತೋರುವ ಒಗ್ಗಟ್ಟು ಮತ್ತು ನಾಯಕತ್ವದ ಗುಣಗಳು ಭವಿಷ್ಯದಲ್ಲಿ ನೀವು ಉತ್ತಮ ನಾಗರಿಕರಾಗಲು ನೆರವಾಗುತ್ತವೆ.

ಮೇಜರ್ ಧ್ಯಾನ್ ಚಂದ್ ಅವರಂತಹ ಕ್ರೀಡಾ ಸಾಧಕರನ್ನು ಸ್ಮರಿಸುತ್ತಾ, ಅವರ ಶ್ರದ್ಧೆ ಮತ್ತು ದೇಶಭಕ್ತಿಯನ್ನು ನೀವು ಮೈಗೂಡಿಸಿಕೊಳ್ಳಿ.
ಇಂದಿನ ಕ್ರೀಡಾಕೂಟವು ನಿಮ್ಮಲ್ಲಿ ಹೊಸ ಚೈತನ್ಯವನ್ನು ತುಂಬಲಿ. ಮೈದಾನದಲ್ಲಿ ಸೋಲು ಅಥವಾ ಗೆಲುವಿಗಿಂತ ನಿಮ್ಮ ಉತ್ಸಾಹ ಮತ್ತು ಸೌಹಾರ್ದತೆ ಶಾಶ್ವತವಾಗಿರಲಿ. ನಿಮ್ಮೆಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು. 

ಡೆಲ್ಲಿ ಇಂಟರ್ನ್ಯಾಷನಲ್ ಸಂಸ್ಥೆಯ ಅಧ್ಯಕ್ಷರಾದ ಡಾ. ಜಗದೀಶ್ ಗೌಡ ರವರು ಹಾಗೂ ಪ್ರಾಚಾರ್ಯರಾದ ರಮ್ಯ ರವರು ಶಾಲೆಯನ್ನು ಅತ್ಯಂತ ಶಿಸ್ತು ಬದ್ಧವಾಗಿ ನಿರ್ವಹಿಸುತ್ತಿರುವುದು ಶ್ಲಾಘನೀಯ ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಸಾಧನೆಯನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದೆನು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾಕ್ಟರ್ ಜಗದೀಶ್ ಗೌಡ ಪ್ರಾಂಶುಪಾಲರಾದ ಶ್ರೀಮತಿ ರಮ್ಯಾ ರವರು ಹಾಗೂ ಜೆಎನ್ಎನ್‌ಸಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕುಮಾರಿ ಜೇಷ್ಠ. ಎಂ ಗೊರಕೋಡ್ ಉಪಸ್ಥಿತರಿದ್ದರು.

ಮಂಜುನಾಥ ಶೆಟ್ಟಿ…

Leave a Reply

Your email address will not be published. Required fields are marked *