ಮಂಜುನಾಥ್ ಶೆಟ್ಟಿ…
ಕರಾಟೆ ಕ್ರೀಡೆಯ, ಆತ್ಮವಿಶ್ವಾಸ, ಶಿಸ್ತು ಮತ್ತು ಕ್ರೀಡಾತ್ಮಕತೆಯನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ - 3ನೇ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಪಂದ್ಯಾವಳಿಯು –2026 ಜನವರಿ 11 ರಂದು ,ಶಿವಮೊಗ್ಗ ಜಿಲ್ಲೆಯ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಸಹ್ಯಾದ್ರಿ ಶಿವಮೊಗ್ಗ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ಸನ್ ಸೈ ನವೀನ್, ಉಪಾಧ್ಯಕ್ಷರಾದ ಶ್ರೀಯುತ ಸನ್ ಸೈ ಸಾಧಿಕ್, ಶ್ರೀಯುತ ಸನ್ ಸೈ ಮಂಜುನಾಥ್ , ರವರು ಆಯೋಜಿಸಲಾದ ಈ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ 1,000 ಕ್ಕೂ ಹೆಚ್ಚು ಕರಾಟೆ ಕ್ರೀಡಾಪಟುಗಳು ಭಾಗವಹಿಸಿದ್ದರು.
ತಮಿಳುನಾಡು, ತೆಲಂಗಾಣ, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಸ್ಪರ್ಧಾಳುಗಳು ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ಭಾಗವಹಿಸಿ ತಮ್ಮ ಅತ್ಯುತ್ತಮ ಕೌಶಲ್ಯ, ಶಿಸ್ತು ಮತ್ತು ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿದರು. ಹಾಗೂ ವಿಜೇತರಾದಂತಹ ಕ್ರೀಡಾಪಟುಗಳಿಗೆ ಟ್ರೋಫಿ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು.
ಈ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲೆಯ ವಿಧಾನ ಪರಿಷತ್ ಶಾಸಕರಾದ ಶ್ರೀಯುತ.ಡಿ.ಎಸ್.ಅರುಣ್ ಅವರು ಅಧಿಕೃತವಾಗಿ ಉದ್ಘಾಟಿಸಿ ತಮ್ಮ ಹಿತ ನುಡಿಗಳನ್ನು ನುಡಿದರು ಮಾತು ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಅಧ್ಯಕ್ಷರಾದ ಶ್ರೀಯುತ ಕಲಗೋಡು ರತ್ನಾಕರ್, DSP ರಾಚಪ್ಪ, ನ್ಯೂಸ್ ವಾರಿಯರ್ಸ್ ಸಂಪಾದಕರಾದ ಶ್ರೀಯುತ ರಘುರಾಜ್ , ಮಮಕೋಸ್ ನಿರ್ದೇಶಕರಾದ ವಿರೂಪಾಕ್ಷಪ್ಪ , ರಾಷ್ಟ್ರೀಯ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ವಾಸುದೇವ್, ಶ್ರೀಯುತ ಡಾ. ಶಿಹಾನ್ ಎ .ಝೆಡ್ ಮುಹಿಬ್ ರವರು, ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ ರೆಫ್ರೀ ಕಮಿಷನರ್ ಸನ್ ಸೈ .ಕೆ.ಪಿ.ಜೊಸ್, ಬೆಳಗಾವಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ಸನ್ ಸೈ ಜಿತೇಂದ್ರ ಕಾಕಟೇಕರ್, ಹಾವೇರಿ ಜಿಲ್ಲೆಯ ಅಧ್ಯಕ್ಷರಾದ ಶ್ರೀಯುತ ಶಿಹಾನ್ ನಾರಾಯಣ್ ಪೂಜಾರ್ , ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ಎನ್ ಮಾಲತೇಶ್, ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಮತ್ತು ಅನೇಕ ಗಣ್ಯರು ಉಪಸ್ಥಿತರಿದು ,ಅತಿಥಿಗಳಾಗಿ ಭಾಗವಹಿಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ- ಉತ್ತೇಜನ ನೀಡಿ ಗೌರವವನ್ನು ತಂದರು.
ಸ್ಪರ್ಧೆಯು ಅತ್ಯಂತ ಶಿಸ್ತುಬದ್ಧವಾಗಿ, ನ್ಯಾಯಸಮ್ಮತವಾಗಿ ಹಾಗೂ ಉತ್ಸಾಹಭರಿತವಾಗಿ ನಡೆಯಿತು. ಕ್ರೀಡಾಪಟುಗಳ ಪ್ರದರ್ಶನ ಪ್ರೇಕ್ಷಕರನ್ನು ಆಕರ್ಷಿಸಿದ್ದು, ಕರಾಟೆ ಕ್ರೀಡೆಯ ಮಹತ್ವವನ್ನು ಮತ್ತಷ್ಟು ಬೆಳಗಿಸಿತು. ಈ ಚಾಂಪಿಯನ್‌ಶಿಪ್ ಕೇವಲ ಸ್ಪರ್ಧೆಯಷ್ಟೇ ಅಲ್ಲದೆ, ಏಕತೆ, ಶ್ರೇಷ್ಠತೆ ಮತ್ತು ಕ್ರೀಡಾತ್ಮಕ ಮನೋಭಾವವನ್ನು ಉತ್ತೇಜಿಸುವ ಹಬ್ಬವಾಗಿ ಮೂಡಿಬಂದಿತು.
ಈ ಕ್ರೀಡಾಕೂಟಕ್ಕೆ ಮೈಸೂರು ಜಿಲ್ಲೆಯಿಂದ ಆಗಮಿಸಿದಂತಹ ಸನ್ ಸೈ ಸೌಜನ್ಯ ಮತ್ತು ಸನ್ ಸೈ ಮನೋಜ್ ಹಾವೇರಿ ಜಿಲ್ಲೆಯ ಸನ್ ಸೈ ಮೋನಿಷಾ ,ದಾವಣಗೆರೆ ಜಿಲ್ಲೆಯ ಸನ್ ಸೈ ಗೌತಮ್, ಹಾವೇರಿ ಜಿಲ್ಲೆಯ ಸನ್ ಸೈ ಮಂಜುನಾಥ್,ಮೈಸೂರು ಜಿಲ್ಲೆಯಿಂದ ಸನ್ ಸೈ ನವೀನ್ , ದಾವಣಗೆರೆ ಜಿಲ್ಲೆಯ ಸನ್ ಸೈ ವೆಂಕಟೇಶ್ ಮತ್ತು ಸನ್ ಸೈ ಅನಿಲ್, ಬಿಜಾಪುರ್ ಜಿಲ್ಲೆಯ ಪ್ರೇಮ್, ಶಿವಮೊಗ್ಗ ಜಿಲ್ಲೆಯ ಸನ್ ಸೈ ಚಂದ್ರಕಾಂತ, ಸನ್ ಸೈ ಮಹಾಬಲೇಶ್ ಜ್ಯೋಯಿಶ್, ಸನ್ ಸೈ ಸತೀಶ್ ಮತ್ತು ಇನ್ನೂ ಹಲವು ಜಿಲ್ಲೆಯವರ ಕರಾಟೆ ಶಿಕ್ಷಕರು ಕ್ರೀಡಾಪಟುಗಳೊಂದಿಗೆ ಸಹಕಾರವನ್ನು ನೀಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುತ್ತಾರೆ.
ಈ ಯಶಸ್ವಿ ಆಯೋಜನೆಗೆ ಸಹಕಾರ ನೀಡಿದ ಎಲ್ಲಾ ಕ್ರೀಡಾಪಟುಗಳು, ತರಬೇತುದಾರರು, ತೀರ್ಪುಗಾರರು, ಸ್ವಯಂಸೇವಕರು, ಆಡಳಿತ ಮಂಡಳಿ ಸದಸ್ಯರು ಹಾಗೂ ಕ್ರೀಡಾಭಿಮಾನಿಗಳಿಗೆ.
ಈ ಪಂದಾವಳಿಯನ್ನು ಆಯೋಜಿಸಿದ ಸಹ್ಯಾದ್ರಿ ಶಿವಮೊಗ್ಗ ಜಿಲ್ಲೆಯ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ಸನ್ ಸೈ ನವೀನ್, ಉಪಾಧ್ಯಕ್ಷರಾದ ಶ್ರೀಯುತ ಸನ್ ಸೈ ಸಾಧಿಕ್, ಶ್ರೀಯುತ ಸನ್ ಸೈ ಮಂಜುನಾಥ್ , ಸನ್ ಸೈ ಕಿರಣ್, ಸನ್ ಸೈ ಸತೀಶ್, ನವೀನ್ ಪ್ರಕಾಶ್, ಅಪೂರ್ವ, ದೀಕ್ಷಾ, ಮೊಹಮ್ಮದ್ ಗೌಸ್, ಆಶಿಕ್ , ಪೃಥ್ವಿ ,ರಕ್ಷಿತ್ ಹೊಳ್ಳ , ಮೋನಿಕಾ, ಮಧು, ಗಿರೀಶ್ ರವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.