ಶಿವಮೊಗ್ಗ ನಗರದ ಶರಾವತಿ ಮಹಿಳಾ ಮಂಡಳಿ ವತಿಯಿಂದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ “ಸಂಕ್ರಾಂತಿ ಸಂಭ್ರಮ” ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ಮುಖಂಡರು ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಎಂ ಶ್ರೀಕಾಂತ್ ರವರು ಎಳ್ಳು-ಬೆಲ್ಲ ನೀಡುವುದರ ಮೂಲಕ ಶುಭಾಶಯಗಳು ಕೋರಿದರು.
ಈ ಸಂದರ್ಭದಲ್ಲಿ ಎಲ್ಲಾ ಮಹಿಳೆಯರಿಗೆ ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ರವರು ಎಳ್ಳು ಬೆಲ್ಲವನ್ನು ವಿತರಿಸಿ ಶುಭಾಶಯ ತಿಳಿಸಿದರು.