ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಬಳಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟು ಕರುಕಲಾಗಿದ್ದು, ಘಟನೆಯಲ್ಲಿ ಹಲವರಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಅರಸಾಳು ಸಮೀಪದ ಸೂಡುರು ಬಳಿಯ 9ನೇ ಮೈಲಿಗಲ್ಲಿನ ಬಳಿ ಬೆಂಕಿ ಹತ್ತಿಕೊಂಡಿದೆ.
ಶ್ರೀ ಅನ್ನಪೂರ್ಣೇಶ್ವರಿ ಟ್ರಾನ್ಸ್‌ಪೋರ್ಟ್ ಸಂಸ್ಥೆಗೆ ಸೇರಿದ ಸ್ಲೀಪರ್ ಕೋಚ್ ಬಸ್ ಇದಾಗಿದ್ದು, ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಚಾಲಕ ಸೇರಿ ಒಟ್ಟು 40 ಬಸ್ಸಿನಲ್ಲಿದ್ದರು ಎಂದು ತಿಳಿದುಬಂದಿದೆ. ಬಸ್ಸಿನಲ್ಲಿದ್ದ ಸುಮಾರು ಏಳರಿಂದ ಎಂಟು ಜನ ಪ್ರಯಾಣಿಕರು ಸುಟ್ಟಗಾಯಗಳಿಂದ ನರಳುತ್ತಿದ್ದು ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಕೆಲವರನ್ನ ರಿಪ್ಪನ್ ಪೇಟೆ ಆಸ್ಪತ್ರೆಗೆ ಸಾಗಿಸಲಾಗಿದೆ.
ಬಸ್ ಕ್ಲೀನರ್ ಸಂಜು ಬಸ್ ಹತ್ತುವ ಮುಂಚೆ ಬಸ್ ನಲ್ಲಿ ಸುಟ್ಟ ವಾಸನೆ ಬರ್ತಿದೆ ಎಂದು ಹೇಳಿದರೂ ಚಾಲಕನ ನಿರ್ಲಕ್ಷ ತೋರಿ ಚಲಿಸಿದ್ದಾನೆ ಎಂದು ಹೇಳಲಾಗುತ್ತಿದೆ. ನಿಟ್ಟೂರಿನಿಂದ ಬೆಂಗಳೂರಿಗೆ ಈ ಬಸ್ ಹೊರಟಿತ್ತು. ಬೆಂಕಿ ಹತ್ತಿಕೊಂಡ ವೇಳೆ ಪ್ರಯಾಣಿಕರೊಬ್ವರು ಮಗುವನ್ನ ಹೊತ್ತುಕೊಂಡು ಹಾರಿದ್ದಾರೆ. ಶ್ರೀನಿಧಿ ಎಂಬ ಮಹಿಳೆಯ ಎರಡು ಕೈಗಳು ಸುಟ್ಟುಹೋಗಿದೆ.ನಿರ್ವಾಹಕ ನಿಖಿಲ್ ನ ಮುಖ ಸುಟ್ಟಿದೆ. ಶ್ವೇತಾ, ಸುಹಾಸ್, ಸಿಂಧು, ಪೂಜಾರವನ್ನ ಹೆಚ್ವಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರೆಫರ್ ಆಗಿದ್ದಾರೆ. ಸದ್ಯಕ್ಕೆ ಯಾರಿಗೂ ಪ್ರಾಣ ಹಾನಿಯಾಗಿಲ್ಲ.