ಮಂಜುನಾಥ್ ಶೆಟ್ಟಿ…
ಶಿಕಾರಿಪುರ
ಕುಂಭಾಶಿ ಕ್ರಿಯೇಷನ್ ಲಾಂಛನದಲ್ಲಿ ಮೂಡಿ ಬರುತ್ತಿರುವ
“”ಪ್ರಣಯ “” ಕನ್ನಡ ಚಲನಚಿತ್ರದ ನಟ ಸೂರಜ್ ರವರು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕದ ತಾಲೂಕು ಮಟ್ಟದ ವಿತರಕರ ಕ್ಯಾಲೆಂಡರನ್ನು ವಿಶೇಷ ಪೂಜೆ ವಿಧಿ ವಿಧಾನದೊಂದಿಗೆ ಕ್ಷೇತ್ರ ದೇವತೆ ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನದ ದೇವರ ಸನ್ನಿಧಿಯಲ್ಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿತರಕ ಹಿರಿಯ ಪತ್ರಕರ್ತ ಜಿಕೆ ಹೆಬ್ಬಾರ್ ಮಾತನಾಡಿ ಪತ್ರಕರ್ತರು ಹಾಗೂ ವಿತರಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಸಂಪಾದಕರು ಬಂಡವಾಳ ಹಾಕಿ ಶ್ರಮಿಸಿದರೆ . ವರದಿಗಾರರು ಮುಂದಿನ ಸವಾಲುಗಳನ್ನು ಎದುರಿಸಿ ಸುದ್ದಿಗಳನ್ನು ತರುತ್ತಾರೆ ಸಿಬ್ಬಂದಿಗಳು ಅದನ್ನು ಮುದ್ರಿಸಿ ಓದುಗರ ಮನ ಮುಟ್ಟಿಸಲು ಪ್ರಯತ್ನ ಪಡುತ್ತಾರೆ ಆದರೆ ವಿತರಕರು ಚಳಿ ಗಾಳಿ ಬಿಸಿಲು ಎನ್ನದೆ ಬೆಳಿಗ್ಗೆ ನಸುಕಿನಲ್ಲಿ ಎದ್ದು ಇವರೆಲ್ಲರ ಶ್ರಮದ ಫಲವನ್ನು ಮನೆ ಮನೆಗೆ ತಲುಪಿಸುವ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿರುತ್ತಾರೆ ಇವರ ಈ ಉತ್ತಮ ಸೇವೆ ಪತ್ರಿಕೆ ಅಭಿವೃದ್ಧಿಗೆ ಪೂರಕ ಹಾಗಾಗಿ ವರದಿಗಾರರು ಹಾಗು ವಿತರಕರು ಒಂದೇ ನಾಣ್ಯದ ಎರಡು ಮುಖಗಳಂತೆ ಕಾರ್ಯನಿರ್ವಹಿಸುತ್ತಾರೆ ಎಂದು ಹಿರಿಯ ಪತ್ರಕರ್ತ ಜಿಕೆ ಹೆಬ್ಬಾರ್ ಅಭಿಪ್ರಾಯೆಸಿದರು.
ಸರ್ಕಾರ ವಿತರಕರ ಗೋಳನ್ನ ಅರಿತು ಅವರಿಗೆ ಸೇವಾ ಭದ್ರತೆ ಆರೋಗ್ಯ ವಿಮೆಯಂತಹ ಸೌಲಭ್ಯಗಳನ್ನು ನೀಡುವುದು ಸೂಕ್ತ ಪತ್ರಿಕೆ ಅಭಿವೃದ್ಧಿಗೆ ವಿತರಕನ ಶ್ರಮ ಅನನ್ಯ ಹಾಗಾಗಿ ವಿತರಕರಿಗೆ ಯಾವುದೇ ಸರ್ಕಾರ ಬಂದರೂ ಆರ್ಥಿಕ ಭದ್ರತೆಯ ಯೋಜನೆಗಳನ್ನು ನೀಡಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದರು. ಹಿರಿಯ ಅರ್ಚಕರಾದ ಪಾಂಡುರಂಗ ಹಾಗೂ ಹಿಮಾಲಯ ರವರು ಇತರರು ಉಪಸ್ಥಿತರಿದ್ದು ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಸಂಭ್ರಮಿಸಿದರು.