ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ನಗರದ ಸಾಗರ ರಸ್ತೆಯ ಮೆಗ್ಗಾನ್ ಆಸ್ಪತ್ರೆಯ ಮುಂಭಾಗದಲ್ಲಿ ತಿಂಡಿ ಗಾಡಿಗಳಿಗೆ ಪಾಲಿಕೆ ಮೂಹೂರ್ತ ಫಿಕ್ಸ್ ಮಾಡಿದೆ. ತಿಂಗಳುಗಟ್ಟಲೆ ಆಸ್ಪತ್ರೆಯ ಮುಂಭಾಗದ ಫುಟ್ ಪಾತ್ ನಲ್ಲಿ ಹಾಗೆ ಉಳಿಸಿಕೊಂಡಿರುವ ತಳ್ಳುವ ಗಾಡಿಗಳನ್ನ ಕ್ರೇನ್ ಮತ್ತು ಲಾರಿ ತರಿಸಿ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.

ಬೀದಿ ಬದಿಯ ಸ್ಕ್ರಾಪ್ ಆಗಿರುವ ಅಥವಾ ನಿಷ್ಕ್ರಿಯಗೊಂಡಿರುವ ತಿಂಡಿಗಾಡಿಗಳು, ಕಬ್ಬಿನ ಹಾಲಿನ ಮಳಿಗೆ, ಇತರೆ ಬಳಕೆ ಮಾಡದೆ ಬೀದಿ ಬದಿಯಲ್ಲೇ ಬಿಟ್ಟು ಹೋಗಿರುವ ಬಗ್ಗೆ ಶಿವಮೊಗ್ಗ ಮಹಾನಗರ ಪಾಲಿಕೆ ತಿಂಗಳುಗಳ ಹಿಂದೆ ಡಿಜಿಟಲ್ ಮಾಧ್ಯಮಗಳ ಪ್ರಕಟಣೆಯನ್ನೂ ಹೊರಡಿಸಿತ್ತು. ತಳ್ಳುವ ಗಾಡಿಗಳನ್ನ ಫುಟ್ ಪಾತ್ ಮೇಲೆ ಬಿಡದೆ ವ್ಯವಹಾರ ಮುಗಿಸಿ ಗಾಡಿಗಳನ್ನ ತೆಗೆದುಕೊಂಡು ಹೋಗುವಂತೆಯೂ ಸಹ ಸೂಚಿಸಲಾಗಿತ್ತು.

ಬದಿಯ ಸ್ಕ್ರಾಪ್ ಆಗಿರುವ ಅಥವಾ ನಿಷ್ಕ್ರಿಯಗೊಂಡಿರುವ ತಿಂಡಿಗಾಡಿಗಳು, ಕಬ್ಬಿನ ಹಾಲಿನ ಮಳಿಗೆ, ಇತರೆ ಬಳಕೆ ಮಾಡದೆ ಬೀದಿ ಬದಿಯಲ್ಲೇ ಬಿಟ್ಟು ಹೋಗಿರುವ ಬಗ್ಗೆ ಶಿವಮೊಗ್ಗ ಮಹಾನಗರ ಪಾಲಿಕೆ ತಿಂಗಳುಗಳ ಹಿಂದೆ ಡಿಜಿಟಲ್ ಮಾಧ್ಯಮಗಳ ಪ್ರಕಟಣೆಯನ್ನೂ ಹೊರಡಿಸಿತ್ತು. ತಳ್ಳುವ ಗಾಡಿಗಳನ್ನ ಫುಟ್ ಪಾತ್ ಮೇಲೆ ಬಿಡದೆ ವ್ಯವಹಾರ ಮುಗಿಸಿ ಗಾಡಿಗಳನ್ನ ತೆಗೆದುಕೊಂಡು ಹೋಗುವಂತೆಯೂ ಸಹ ಸೂಚಿಸಲಾಗಿತ್ತು.

ಬೀದಿಬದಿ ವ್ಯಾಪಾರ ಗುರುತಿನ ಹೊಂದಿದ್ದು ವ್ಯವಹಾರ ಮಾಡದೆ ಫುಟ್ಪಾತ್ ನಲ್ಲಿ ಗಾಡಿಗಳನ್ನು ನಿಲ್ಲಿಸಿದ ಬಗ್ಗೆ ಅವರಿಗೆ ತೆರವಿಗೆ ನೋಟಿಸ್ ನೀಡಲಾಗಿತ್ತು. ಆದರೂ ಸ್ಪಂದಿಸದೆ ಇರುವ ವ್ಯಕ್ತಿಗಳ ಗಾಡಿಗಳನ್ನು ಪಾಲಿಕೆ ಇಂದಿನಿಂದ ತಿರುವುಗೊಳಿಸಲು ಕಾರ್ಯ ಪ್ರಾರಂಭಿಸಿದೆ.

Leave a Reply

Your email address will not be published. Required fields are marked *