ತೀರ್ಥಹಳ್ಳಿ ತಾಲೂಕಲ್ಲಿ ಕರೋನಾ ಹೆಚ್ಚುತ್ತಿರುವ ಹಿನ್ನೆಲೆ ತೀರ್ಥಹಳ್ಳಿ ಜೆಸಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ಜತೆ ಕೆಪಿಸಿಸಿ ಟಾಸ್ಕ್ ಪೋರ್ಸ್ ಅಧ್ಯಕ್ಷ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಸದಸ್ಯರ ತಂಡ ಸಮಾಲೋಚನಾ ಸಭೆ ನಡೆಸಿ ಆಡಳಿತಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು. ಜೊತೆಗೆ ತೀರ್ಥಹಳ್ಳಿ ತಾಲೂಕನ್ನು ಕರೋನಾ ಮುಕ್ತ ಮಾಡಲು ತಾವೆಲ್ಲರೂ ಸೇರಿ ಕೆಲಸ ಮಾಡೋಣ ಎಂದು ವೈದ್ಯರು ಮತ್ತು ಸಿಬ್ಬಂದಿಗೆ ಧೈರ್ಯ ತುಂಬಿದರು.
ಇದೇ ವೇಳೆ ಸೋಂಕು ನಿಯಂತ್ರಣಕ್ಕೆ ತಾಲ್ಲೂಕು ಆರೋಗ್ಯ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು,
ಮತ್ತು ಜೆಸಿ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತಾಗಿ ಮಾಹಿತಿ ಪಡೆದರು. ತಾಲ್ಲೂಕು ವೈದ್ಯಾಧಿಕಾರಿಗಳಾದ ಗಣೇಶ್ ಭಟ್, ಡಾ.ನಿಶ್ಚಲ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯೋಸ್, ಕಾಂಗ್ರೆಸ್ ನಾಯಕರಾದ ರಾಘವೇಂದ್ರ ರವೀಂದ್ರ ಶೆಟ್ಟಿ, ಕೆಸ್ತೂರು ಮಂಜುನಾಥ್, ಅಮ್ರಪಾಲಿ ಸುರೇಶ್, ಪಟ್ಟಣ ಪಂಚಾಯತ್ ಸದಸ್ಯರಾದ ಗೀತಾ ರಮೇಶ್, ಸುಶೀಲಾ ಶೆಟ್ಟಿ, ನಮ್ರತ್,
ಟಾಸ್ಕ್ ಪೋರ್ಸ್ ಸಮಿತಿ ಸದಸ್ಯ ಹರೀಶ್ ಮಿಲ್ಕೇರಿ ಸೇರಿದಂತೆ ಹಲವರು ಹಾಜರಿದ್ದರು.
ಕಿಮ್ಮನೆ ಸಹಾಯ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ವಯುಕ್ತಿಕ ಸಮಸ್ಯೆಯಿಂದ ಎಲ್ಲಿಯೂ ಕಂಡಿರಲಿಲ್ಲ. ಆದರೆ ಕಷ್ಟದಲ್ಲಿರುವ ಜನತೆಗೆ ಸಹಾಯ ಮಾಡುವ ನಾವು ನಮ್ಮವರು ತಂಡದ ಜತೆ ಪ್ರತಿ ದಿನ ಸಂಪರ್ಕದಲ್ಲಿದ್ದು ಅಗತ್ಯ ಹಣಕಾಸು, ಇತರೆ ನೆರವು ನೀಡಿದ್ದಾರೆ. ಆದ್ರೆ ಎಲ್ಲಿಯೂ ಅವರು ಹೇಳಿಕೊಳ್ಳದೆ ಮಾದರಿಯಾಗಿದ್ದಾರೆ. ಕಿಮ್ಮನೆ ನಾಯಕತ್ವದಲ್ಲಿ ಎಲ್ಲಾ ಹಳ್ಳಿಗಳಲ್ಲೂ ಕಾರ್ಯಕರ್ತರು ಸೇವೆ ಮಾಡುತ್ತಿದ್ದಾರೆ

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ