ಇಂದು ಬೆಳಿಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ KPCC ರಾಜ್ಯ ಕಾರ್ಯದರ್ಶಿ ದೇವೇಂದ್ರಪ್ಪ ಲಾಕ್ ಡೌನ್ ನಿಂದಾಗಿ ದೇವಸ್ಥಾನಗಳು ಬಾಗಿಲು ತೆಗೆಯುತ್ತಿಲ್ಲ. ಹಾಗಾಗಿ ಅರ್ಚಕರಿಗೆ ಹಾಗೂ ಸಿಬ್ಬಂದಿ ವರ್ಗ ಗಳಿಗೆ ಹೇಳತೀರದ ಕಷ್ಟ ಬಂದೊದಗಿದೆ. ಮುಖ್ಯವಾಗಿ ಅರ್ಚಕರುಗಳು ಸ್ವಾಭಿಮಾನಿಗಳು ಅವರು ಯಾರಲ್ಲಿಯೂ ಕೇಳುವುದಿಲ್ಲ. ಹಾಗಾಗಿ ನಗರಾದ್ಯಂತ ಕಾಂಗ್ರೆಸ್ ಹಾಗೂ ಡಿ ಕೆ ಶಿವಕುಮಾರ್ ಯುವ ಬ್ರಿಗೇಡ್ ವತಿಯಿಂದ ಸುಮಾರು 300 ಫುಡ್ ಕಿಟ್ ಗಳನ್ನು ಅರ್ಚಕರಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ನೀಡಲು ತೀರ್ಮಾನಿಸಲಾಗಿದೆ. ಶನಿವಾರದಿಂದ ಈ ಕಾರ್ಯಕ್ರಮ ಶುರುವಾಗಲಿದ್ದು ತೊಂದರೆಯಲ್ಲಿರುವ ಎಲ್ಲ ಅರ್ಚಕರು ಹಾಗೂ ಸಿಬ್ಬಂದಿಗಳು ಈ ಕೆಳಗಿನ ಮೊಬೈಲ್ ನಂಬರಿಗೆ ಕರೆ ಮಾಡಿದರೆ ಫುಡ್ ಕಿಟ್ ಗಳನ್ನು ಅವರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.
9483687019
9945063128
9113018770.

ಫುಡ್ ಕಿಟ್ ನಲ್ಲಿ ಏನೇನಿವೆ ? 5ಕೆಜಿ ಅಕ್ಕಿ , 2ಕೆಜಿ ಗೋಧಿ , 2ಕೆಜಿ ರಾಗಿ , 1ಕೆಜಿ ಅವಲಕ್ಕಿ , 1ಲೀಟರ್ ಅಡುಗೆ ಎಣ್ಣೆ, 1ಲೀಟರ್ ತುಪ್ಪ ಹೀಗೆ ಹತ್ತು ವಸ್ತುಗಳಿವೆ ಹಾಗೂ 1ತರಕಾರಿ ಕಿಟ್ ಈ ಸಂದರ್ಭದಲ್ಲಿ ಹೆಚ್ ಸಿ ಯೋಗೇಶ್ ಕವಿತ ರಾಘವೇಂದ್ರ ಶಿವಕುಮಾರ್ ಅರ್ಜುನ್ ಹಾಗೂ ಡಿ ಕೆ ಶಿವಕುಮಾರ್ ಬ್ರಿಗೇಡ್ ನ ರಾಘವೇಂದ್ರ ಉಪಸ್ಥಿತರಿದ್ದರು
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ