ಅರಹತೊಳಲು ಕೈಮರದ ಭಾರತೀಯ ಜನತಾ ಪಾರ್ಟಿ ಕಛೇರಿಯಲ್ಲಿ ಕಾರ್ಯಗಾರವನ್ನು ಗ್ರಾಮಾಂತರ ಶಾಸಕರಾದ ಶ್ರೀ ಕೆ.ಬಿ.ಅಶೋಕ ನಾಯ್ಕ ರವರು ಉದ್ಘಾಟಿಸಿ, ಮಾತನಾಡುತ್ತಾ ಕೇಂದ್ರ ಹಾಗೂ ರಾಜ್ಯ ಸರಕಾರ ಜಾರಿಗೊಳಿಸಿರುವ ಜನಪರ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಿಳಿಸುವ ಕಾರ್ಯಗಳ ಜೊತೆಯಲ್ಲಿ ಮುಂಬರುವ ತಾಲೂಕಾ ಹಾಗೂ ಜಿಲ್ಲಾ ಪಂಚಾಯತ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಬೂತ್ ಅಧ್ಯಕ್ಷರುಗಳಿಗೆ ಕರೆ ನೀಡಿದರು. ಪಕ್ಷದಲ್ಲಿ ಬೂತ್ ಅಧ್ಯಕ್ಷರನ್ನು ಗುರುತಿಸಿ ಗೌರವಿಸಲ್ಪಡುವ ಪಕ್ಷ ಭಾರತೀಯ ಜನತಾ ಪಾರ್ಟಿ ಮತ್ತು ನಾವು ಚುನಾವಣೆಗೆ ಸೀಮಿತವಲ್ಲ ಸಮಾಜದ ಋಣ ತೀರಿಸುವ ಕೆಲಸವೂ ನಮ್ಮಿಂದವಾಗಬೇಕಾಗಿದೆ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು. ಬಿಜೆಪಿಯಿಂದ ನಾಮಫಲಕ ವಿತರಣೆ ರಾಜ್ಯ ಬಿಜೆಪಿಯಿಂದ ಪ್ರತಿ ಬೂತ್ ಅಧ್ಯಕ್ಷರ ಮನೆಗಳಿಗೆ ನಾಮ ಪಲಕ ನೀಡುವ ಕಾರ್ಯಕ್ರಮ ಕಚೇರಿಯಲ್ಲಿ ನಡೆಯಿತು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಹೋದರಿಯರು ಕಛೇರಿಗೆ ಭೇಟಿ ನೀಡಿ ರಕ್ಷಾ ಬಂಧನ ಹಬ್ಬದ ಅಂಗವಾಗಿ, ರಾಖಿ ಕಟ್ಟಿ, ಸಿಹಿ ನಿಡಿ ಶುಭ ಕೋರಿದರು. ಸದರಿ ಸಭೆಯಲ್ಲಿ ಹೊಳೆಹೊನ್ನೂರು ಮಂಡಲ ಅಧ್ಯಕ್ಷರಾದ ಮಂಜುನಾಥ್, ಮಂಡಲದ ಪ್ರಭಾರಿಗಳಾದ ನಾಗರಾಜ್, ಹೃಷಿಕೇಶ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಜಗದೀಶ್, ಮಂಡಲದ ಪ್ರಧಾನ ಕಾರ್ಯದರ್ಶಿ ಉಜ್ಜಿನಪ್ಪ, ಮಲ್ಲೇಶ್ ಹಾಗೂ ವಿವಿಧ ನಿಗಮಗಳ ನಿರ್ದೇಶಕರು, ಮಂಡಲದ ಸಮಿತಿಯವರು, ಬೂತ್ ಅಧ್ಯಕ್ಷರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153