ಆಭರಣಗಳ ಮೇಲೆ ಹಾಲ್ಮಾಮಾರ್ಕ್ ಮಾಡುವುದನ್ನು ಕಡ್ಡಾಯಗೊಳಿಸುವ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ತಾವು ಖರೀದಿಸಿರುವ ಆಭರಣಗಳೆಲ್ಲ ತಿರುಗಿ ಮಾರಾಟ ಮಾಡುವಾಗಲೂ ಸೂಕ್ತ ಬೆಲೆ ಒದಗಿಸಿ ತನ್ಮೂಲಕ ಗ್ರಾಹಕರಿಗೆ ನಂಬಿಕೆ ಮತ್ತು ಸಂತೃಪ್ತಿಯನ್ನು ಒದಗಿಸುವುದರಿಂದ ನೋವು ಹಾಲ್ ಮಾರ್ಕ್ ಹೊಂದಿರುವ ಆಭರಣಗಳನ್ನು ಮಾತ್ರ ಮಾರಾಟ ಮಾಡಲು ಸಿದ್ಧವಿದ್ದೇವೆ. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರವು ದಿನಾಂಕ:1.07.2021ರಿಂದ ಅನ್ವಯವಾಗುವಂತೆ ಎಚ್ .ಯು. ಐ. ಡಿ (hallmark unique identification number) ಪರಿಚಯಿಸುತ್ತದೆ. * ಹೆಚ್ ಪಿ ಐ ಡಿ ಯ ಗ್ರಾಹಕರ ಹಿತಾಸಕ್ತಿಗೆ ವಿರುದ್ಧವಾಗಿದೆ ಮತ್ತು ಸರಾಗ ವಹಿವಾಟಿನ ತತ್ವಕ್ಕೆ ವಿರುದ್ಧವಾಗಿದೆ.* ಈ ಲೇಖನದಲ್ಲಿ ರಸ್ತೆಯ ಸಾಕಷ್ಟು ತೊಡಕಿನಿಂದ ಕೂಡಿರುವುದರಿಂದ ಗ್ರಾಹಕರಿಗೆ ಮತ್ತು ಎಂ .ಎಸ್. ಎಂ.ಇ ಆಭರಣ ಉದ್ಯೋಗಗಳಿಗೆ ಕಿರುಕುಳ ನೀಡುವಂತೆ ಭಾಸವಾಗುತ್ತದೆ.* ದಂಡ ವಿಧಿಸುವ ನಿಬಂಧನೆಗಳು ಉಳಿಸುವಿಕೆ ಮತ್ತು ಜಪ್ತಿ ಮಾಡುವ ಕ್ರಮಗಳು ಅಂತಿಮವಾಗಿ ಈ ಉದ್ಯಮದಲ್ಲಿ ಹೊಸದೊಂದು ಸಂಹಿತೆಯನ್ನೇ ರೂಪಿಸುವುದಕ್ಕೆ ಎಡೆಮಾಡಿಕೊಡುತ್ತದೆ.* ಈ ತಾಂತ್ರಿಕ ವ್ಯವಸ್ಥೆಯ ದೇಶದಲ್ಲಿನ ಸಣ್ಣ ಮತ್ತು ಮಧ್ಯಮ ಗಾತ್ರದ ಆಭರಣ ಉದ್ಯಮವನ್ನು ನೆಲಸಲು ಮಾಡುತ್ತವೆ.* ಈ ಎಚ್. ಯು. ಐ. ಡಿ ವ್ಯವಸ್ಥೆಯಲ್ಲಿ ಗ್ರಾಹಕೀಕೃತ ಏಕ ಆಭರಣ ವನ್ನು ಕೇಂದ್ರಕ್ಕೆ ಕಳಿಸಬೇಕಾದ ಸನ್ನಿವೇಶದಿಂದ ಹಾಲ್ ಮಾರ್ಕ್ ಕೇಂದ್ರಗಳು ಆಭರಣವನ್ನು ಹಾನಿಗೊಳಿಸಿದರೆ ಅದನ್ನು ಗ್ರಾಹಕರಿಗೆ ನೀಡಲು ಸಾಧ್ಯವಾಗುವುದಿಲ್ಲ.* ರಾಷ್ಟ್ರಾದ್ಯಂತ 2.00.000ಕ್ಕೂ ಹೆಚ್ಚು ಸಣ್ಣ ಮತ್ತು ಮಾಧ್ಯಮ ಆಭರಣ ಉದ್ಯಮಿಗಳು ಅಸ್ತಿತ್ವದಲ್ಲಿದ್ದು 25 ಲಕ್ಷಕ್ಕೂ ಅಧಿಕ ಸಂಖ್ಯೆಯ ಆಭರಣ ತಯಾರಕರು ಈ ಆಭರಣ ಉದ್ಯಮವನ್ನೇ ಅವಲಂಬಿಸಿದ್ದು ಮೇಲ್ಕಂಡ ಎಲ್ಲ ಸಮಸ್ಯೆಗಳಿಂದ ದಯಮಾಡಿ ಆಭರಣ ಉದ್ಯಮದಲ್ಲಿ ಪರಿಚಯಿಸಿರುವ ಎಚ್. ಯು.ಐ.ಡಿ ವ್ಯವಸ್ಥೆಯನ್ನು ಹಿಂಪಡೆಯಬೇಕೆಂದು ತಿಳಿಸುತ್ತೆವೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153