ಶಿವಮೊಗ್ಗ ಕೆ.ಎಂ.ಎಫ್ ಡೈರಿಯಿಂದ ಹಾಲು ಮತ್ತು ಹಾಲು ಉತ್ಪನ್ನ ಗಳನ್ನ ಸಾಗರ ಮತ್ತು ಜೋಗಕ್ಕೆ ಸಾಗಿಸುವಾಗ, ಆಯನೂರ್ ಮತ್ತು ಕುಂಸಿ ಮಾರ್ಗ ಮದ್ಯೆ ಕ್ಯಾಂಟರ್ ವಾಹನದ ಡ್ರೈವರ್ ನಿದ್ರೆ ಮಂಪಿನಲ್ಲಿ ರಸ್ತೆಯ ಎಡ ಭಾಗದಲ್ಲಿ ಹಳೆಯ ದೊಡ್ಡ ನಿಲಿಗೇರಿ ಮರಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ, ಅದರಲ್ಲಿದ್ದ ಡ್ರೈವರ್ ಮತ್ತು ಕ್ಲೀನರ್ ಸಂತೋಷ್. ವಾಹನದ ಕ್ಯಾಬಿನ್ ನಲ್ಲಿ ಸಿಕ್ಕಿ ಹಾಕಿಕೊಂಡಿರುತ್ತಾರೆ. ಅದೃಷ್ಟ ವಶಾತ್ ಡ್ರೈವರ್ ಹೊರಬಂದಿದಾನೆ. ಆದರೆ ಕ್ಲೀನರ್ ಸಂತೋಷ್ ರವರ ಸೊಂಟದ ಕೆಳಭಾಗ ಎರಡು ಕಾಲು ಮುರಿದುಕೊಂಡು ಹೊರಬರಲಾರದೆ ಒದ್ದಾಡುವಾಗ ನಮಗೆ ಕರೆ ಬಂದ ಕೂಡಲೇ ನಮ್ಮ ಮೊಬೈಲ್ ರೆಸ್ಕ್ಯೂ ವಾಹನದೊಂದಿಗೆ ಮಾನ್ಯ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಅಶೋಕ್ ಕುಮಾರ್ ಮತ್ತು ಅಗ್ನಿ ಶಾಮಕ ಠಾಣಾಧಿಕಾರಿ ಪ್ರವೀಣ್ ಮತ್ತು ಸಿಬ್ಬಂದಿಗಳಾದ ಹೆಚ್. ಸುನಿಲ್ , ವಿಜಯ್ ಖುರೇಶಿ, ಮನುನಾಥ್, ವಿಷ್ಣುನಾಯ್ಕ್, ದೇವರಾಜ್, ಮೂಡಬಸ್ಸಪ್ಪ ರವರು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿ. ನಮ್ಮ ಎಂ.ವಿ.ಆರ್ ವಾಹನ್ದಲ್ಲಿ ಇದ್ದ ಹೈಡ್ರಾಲಿಕ್ ಮೆಟಲ್ ಕಟರ್, ಬೋಲ್ಟ್ ಕಟರ್, ಮತ್ತು ಸ್ಪ್ರೆಡ್ಡರ್ ನಿಂದ ಅಪಘಾತವಾದ ವಾಹನದ ಕ್ಯಾಬಿನ್ ನ ರಾಡು, ಕಬ್ಬಿಣದ ಕಂಬಿಗಳನ್ನ ಕಟ್ ಮಾಡಿ. ಅಗ್ನಿ ಶಾಮಕ ವಾಹನವಾದ ಎಂ.ವಿ.ಆರ್ ಹೈಡ್ರಾಲಿಕ್ ಇನ್ಚ್ಜ್ ನಿಂದ ಜೋರಾಗಿ ಎಳೆಸಿ ಒಳಗೆ ಸಿಕ್ಕಿ ಹಾಕಿಕೊಂಡ ಕ್ಲೀನರ್ ಸಂತೋಷನನ್ನು ಜೀವಂತವಾಗಿ ಬದುಕಿಸಿ, ಆಂಬುಲೆನ್ಸ್ ನಲ್ಲಿ ಚಿಕಿಸ್ತೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153