
ಶಿವಮೊಗ್ಗದಲ್ಲಿ ಪವಿತ್ರ ರಂಜಾನ್ ಹಬ್ಬವನ್ನ ಮುಸ್ಲಿಂ ಸಮುದಾಯದಿಂದ ಸಡಗರದಿಂದ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿಯದರು ಇರುವ ಈದ್ಗ ಹಾಗೂ ಇತರೆ ಪ್ರಾರ್ತನಾ ಮಂದಿರಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬ ಆಚರಣೆ ಮಾಡಿದರು.
ರಂಜಾನ್ (ರಮದಾನ್) ಇಸ್ಲಾಮಿಕ್ ಕ್ಯಾಲೆಂಡರ್‌ನ ಅತ್ಯಂತ ಪವಿತ್ರವಾದ 9ನೇ ತಿಂಗಳಲ್ಲಿ ಬರಲಿದೆ. ರಂಜಾನ್ ವೇಳೆ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಕಠಿಣ ಉಪವಾಸ (ರೋಜಾ) ಆಚರಿಸಿ, ಪ್ರಾರ್ಥನೆ, ದಾನ (ಝಕಾತ್) ಮತ್ತು ಆತ್ಮಶುದ್ಧಿಗೆ ಮಹತ್ವ ನೀಡುತ್ತಾರೆ. ಈ ತಿಂಗಳ ಕೊನೆಯಲ್ಲಿ ಚಂದ್ರದರ್ಶನದ ನಂತರ ಈದ್-ಉಲ್-ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಅದರಂತೆ ನಿನ್ನೆ ಚಂದ್ರದರ್ಶನ ಪಡೆದ ಮುಸ್ಲೀಂರು ನಗರದ ಡಿಸಿ ಕಚೇರಿ ಎದುರಿನ ಈದ್ಯಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಪರಸ್ಪರ ತಬ್ಬಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನ ಕೋರಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಈದ್ದಾ ಮೈದಾನದಲ್ಲಿ ಪ್ರಾರ್ಥನೆ ಆರಂಭವಾಗಿದೆ. ಸುಮಾರು 30 ನಿಮಿಷ ಪ್ರಾರ್ಥನೆ ಸಲ್ಲಿಸಿದ್ದಾರೆ.