ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ರಂಗಾಯಣವು ಏ.14 ರಿಂದ ಮೇ.03ರವರೆಗೆ ಆಯೋಜಿಸುತ್ತಿರುವ ಚಿಣ್ಣರ ಸಿಹಿಮೊಗ್ಗೆ-ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ರಂಗತರಬೇತಿ, ನಾಟಕ ನಿರ್ದೇಶನ ಮಾಡಲು ರಂಗಭೂಮಿಯ ಹಿನ್ನೆಲೆಯುಳ್ಳ 06 ನಾಟಕ ನಿರ್ದೇಶಕರು ಮತ್ತು 06 ಜನ ಸಹಾಯಕ ನಿರ್ದೇಶಕರ ಆಯ್ಕೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಮಾ. 16 ರಿಂದ ಮಾ. 30ರವರೆಗೆ ವಿಸ್ತರಿಸಲಾಗಿದೆ ಎಂದು ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ ಎ.ಸಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ರಂಗಾಯಣ, ಶಿವಮೊಗ್ಗ ಕಛೇರಿ, ದೂರವಾಣಿ ಸಂಖ್ಯೆ 08182-256353, 7975229166 ಯನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *