ಮಂಜುನಾಥ್ ಶೆಟ್ಟಿ…

ಭಾರತದ ಜನಗಣತಿ-2027ರ ಅಂಗವಾಗಿ ಕರ್ನಾಟಕದಲ್ಲಿ ಮೊದಲ ಹಂತದ ‘ಮನೆಗಳ ಪಟ್ಟಿ ಮತ್ತು ಮನೆ ಗಣತಿ’ ಪ್ರಕ್ರಿಯೆಯು ದಿನಾಂಕ 16.04.2026 ರಿಂದ 15.05.2026 ರವೆರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಒಟ್ಟು 30 ದಿನಗಳ ಕಾಲ ನಡೆಯುವ ಈ ಗಣತಿಯಲ್ಲಿ ಮನೆಗಳ ಸ್ಥಿತಿಗತಿ, ಲಭ್ಯವಿರುವ ಸೌಲಭ್ಯಗಳು ಹಾಗೂ ಆಸ್ತಿಪಾಸ್ತಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
ದಿ: 1-04-2026 ರಿಂದ 15-04-2026 ರವರೆಗೆ
‘ಸ್ವಯಂ ಗಣತಿ’ ಆಯ್ಕೆ ಲಭ್ಯವಿದೆ.
ಸ್ವಯಂ ಗಣತಿ ಮಾಡುವ ವಿಧಾನ…
ಅಧಿಕೃತ ಪೋರ್ಟಲ್‌ನಲ್ಲಿ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗುವುದು.
ನಿಮ್ಮ ಸ್ಥಳವನ್ನು ಆಯ್ಕೆ ಮಾಡಿ, ನಕ್ಷೆಯಲ್ಲಿ ಮನೆಯನ್ನು ಗುರುತಿಸುವುದು.
ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಸಬ್ಮಿಟ್ ಮಾಡುವುದು.ಸಲ್ಲಿಕೆಯ ನಂತರ ಲಭಿಸುವ SE ID(ಎಸ್ಇ ಐಡಿ) ಅನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು. ಹಾಗೂ ಗಣತಿದಾರರು ಭೇಟಿ ನೀಡಿದಾಗ ಅವರಿಗೆ ತೋರಿಸಬೇಕು.
ಗಣತಿದಾರರು ಮತ್ತು ಮೇಲ್ವಿಚಾರಕರ ಕ್ಷೇತ್ರ ಭೇಟಿ…
ಏಪ್ರಿಲ್ 16ರಿಂದ ಮೇ 15ರವರೆಗೆ ಗಣತಿದಾರರು ಪ್ರತಿಯೊಂದು ಮನೆಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಸ್ವಯಂ ಗಣತಿ ಮಾಡಿಕೊಂಡವರು ತಮ್ಮಲ್ಲಿರುವ ಎಸ್ ಇ ಐಡಿ ಅನ್ನು ಗಣತಿದಾರರಿಗೆ ತೋರಿಸಿ ದತ್ತಾಂಶವನ್ನು ಪರಿಶೀಲಿಸಿಕೊಳ್ಳಬಹುದು. ಒಂದು ವೇಳೆ ಸ್ವಯಂ ಗಣತಿ ಮಾಡದಿದ್ದಲ್ಲಿ, ಗಣತಿದಾರರೇ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತಾರೆ.
ಸಾರ್ವಜನಿಕರು, ಅಧಿಕಾರಿಗಳು, ಮತ್ತು ಸಿಬ್ಬಂದಿಗಳು https://se.census.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಸ್ವಯಂ ಗಣತಿಯಲ್ಲಿ ಭಾಗವಹಿಸುಂತೆ ಜಿಲ್ಲಾಡಳಿತ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ತಾಲೂಕು ಆಡಳಿತ, ಸ್ಥಳೀಯ ಸಂಸ್ಥೆ ಅಥವಾ ಜಿಲ್ಲಾಡಳಿತದ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.