ಸಾಗರ ತಾಲ್ಲೂಕು ಶರಾವತಿ ಕಣಿವೆಯ ವನ್ಯಜೀವಿ ವಲಯದಲ್ಲಿ 35 ಗ್ರಾಮಗಳಿದ್ದು ರಾಜ್ಯಕ್ಕೆ ವಿದ್ಯುತ್ ಒದಗಿಸುವ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಿಂದ ಭೂಮಿ ಕಳೆದುಕೊಂಡು ಈ ಗ್ರಾಮಗಳಲ್ಲಿ ಸಣ್ಣ ಹಿಡುವಳಿ ಕೃಷಿಕರಾಗಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.ವನ್ಯಜೀವಿ ಸಂರಕ್ಷಣೆಯ ನೆಪದಲ್ಲಿ ಮತ್ತು ಅರಣ್ಯ ರಕ್ಷಣೆಯ ಹೆಸರಲ್ಲಿ ಈ ಪ್ರದೇಶದಲ್ಲಿ ಕೃಷಿಕರ ಹಕ್ಕು ಮತ್ತು ನಾಗರಿಕ ಸೌಲಭ್ಯಗಳನ್ನು ಪಡೆಯುವ ಹಕ್ಕನ್ನು ಅರಣ್ಯ ಇಲಾಖೆಯವರು ಕಸಿಯುತ್ತಿದ್ದಾರೆ.ಸಾಗುವಳಿಯಲ್ಲಿರುವ ಕಂದಾಯ ಭೂಮಿಯಲ್ಲಿ ಮತ್ತು ಅರಣ್ಯ ಭೂಮಿಯಲ್ಲಿ ಕಾನೂನುಬದ್ಧ ಸಂಕ್ರಮಿಕರಣ ಕೋರಿ ಅರ್ಜಿಗಳಿದ್ದರೂ ರೈತರು ಬೆಳೆದ ಅಡಿಕೆ ಮತ್ತಿತರ ಬೆಳೆಗಳನ್ನು ನಾಶ ಮಾಡುವ ಭೂಮಿಯಿಂದ ಖುಲ್ಲಾ ಪಡಿಸುವ ಅರಣ್ಯ ಇಲಾಖೆಯ ಕ್ರಮ ಕಾನೂನು ಬಾಹಿರವಾದದ್ದು ಅಕ್ರಮವಾಗಿದ್ದು ಆಗಿದೆ. ನಾಗರಿಕರ ಮೂಲಭೂತ ಸೌಲಭ್ಯಗಳಾದ ರಸ್ತೆ ಅಭಿವೃದ್ಧಿಗೆ ಅಡ್ಡಿ ಪಡಿಸಲಾಗುತ್ತಿದೆ ಗ್ರಾಮಗಳ ವಸತಿ ಪ್ರದೇಶಕ್ಕೆ ವಿದ್ಯುತ್ ಸಂಪರ್ಕಕ್ಕೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಭೂ ಮಂಜೂರಾತಿಗೆ ಅಡ್ಡಿಪಡಿಸುತ್ತಿದೆ.ಕಡಕೋಡು ರಾಮನಾಯಕ್ ಇವರ ಬೆಳೆದ ಅಡಿಕೆ ಮರಗಳನ್ನು ಕಡಿದು ಅನಾಗರಿಕವಾಗಿ ನಡೆದುಕೊಳ್ಳಲಾಗಿದೆ ಅಡಿಕೆ ಮರಗಳನ್ನು ಕಡಿದು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ.ಕೊಳವನಹಳ್ಳಿ ಜಟ್ಟಯ್ಯ ಎನ್ನುವವರ ಮಾರುತಿ ಓಮಿನಿ ಕಾರನ್ನು ಕಾರಣವಿಲ್ಲದೇ ವಶಪಡಿಸಿಕೊಂಡು 3ತಿಂಗಳಾದರೂ ಪೊಲೀಸರ ವಶದಿಂದ ವಾಹನ ಬಿಡುಗಡೆ ಆಗುತ್ತಿಲ್ಲ ಜನರ ನಾಗರಿಕ ಹಕ್ಕುಗಳ ಬಗ್ಗೆ ಯಾವ ಬೆಲೆಯೂ ಇಲ್ಲದೆ ಅಮಾನುಷವಾಗಿ ವರ್ತಿಸಿರುವ ಅರಣ್ಯ ಇಲಾಖೆಯ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ.ಶಿವಮೊಗ್ಗ ಜಿಲ್ಲಾಧಿಕಾರಿಗಳ ಆದೇಶದಂತೆ ಕಂದಾಯ ಭೂಮಿ ಪಟ್ಟಾ ಭೂಮಿ ಗೋಮಾಳ ಮತ್ತು ಸ್ಟೇಟ್ ಫಾರೆಸ್ಟ್ ಮತ್ತು ರಿಸರ್ವ್ ಫಾರೆಸ್ಟ್ ಗೆ ಒಳಪಡುವ ಭೂಮಿಯನ್ನು ಹೊರತುಪಡಿಸಿ ಶರಾವತಿ ಕಣಿವೆ ಎಲ್ ಟಿ ಸ್ಯಾಕುಯರಿ ಎಂದು ಘೋಷಣೆ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ ಆದರೂ ಈ ಅಧಿಸೂಚನೆಯಂತೆ ಇದುವರೆಗೂ ಸರ್ವೇ ಕಾರ್ಯ ನಡೆಸದೆ ಜನ ಜೀವನಕ್ಕೆ ಅವರ ಹಕ್ಕು ಬಾಂಧವ್ಯತೆ ಗಳಿಗೆ ತೊಂದರೆ ಕೊಡುವುದು ನಿವಾಸಿಗಳಿಗೆ ಎಸಗುತ್ತಿರುವ ಕಿರುಕುಳ ಅನ್ಯಾಯವಾಗುತ್ತಿದೆ ಅವರ ಮೂಲಭೂತ ಹಕ್ಕುಗಳಿಗೆ ಬಾಧಕವಾಗುತ್ತದೆ.ಆದ್ದರಿಂದ ಈ ದಿನ ನಾವು ಅಗ್ರಹ ಪಡಿಸುವುದೇನೆಂದರೆ ಮೇಲಿನ ಅಧಿಸೂಚನೆಯಂತೆ ಗ್ರಾಮಸ್ಥರು ಸಮಕ್ಷಮದಲ್ಲಿ ಸರ್ವೆ ಕಾರ್ಯ ಕೂಡಲೇ ನಡೆಯಬೇಕು ವನ್ಯಜೀವಿ ವಲಯದ ಗಡಿ ಕರಾರುವಕ್ಕಾಗಿ ಗುರುತಿಸಲ್ಪಡಬೇಕು ಅಲ್ಲಿಯವರೆಗೆ ವನ್ಯಜೀವಿ ವಲಯದ ಹೆಸರಲ್ಲಿ ನಿವಾಸಿಗಳ ಹಕ್ಕುಗಳ ದಮನವನ್ನು ಮಾಡಕೂಡದು ಎಂದು ಆಗ್ರಹಿಸುತ್ತೇವೆ ಹಾಗೂ ದೌರ್ಜನ್ಯ ಪ್ರಕರಣಗಳನ್ನು ತನಿಖೆಗೆ ಒಳಪಡಿಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸುತ್ತೇವೆ.ಸಾಗರ ತಾಲೂಕು ಕರೂರು ಬಾರಂಗಿ ಹೋಬಳಿಯ ನಾಗರಿಕರು ನೋ ನೆಟ್ವರ್ಕ್ ನೋ ಓಟ್ ಹೋರಾಟ ಮಾಡುತ್ತಿದ್ದು ಮೊಬೈಲ್ ಟವರ್ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಅಡ್ಡಿಪಡಿಸಬಾರದೆಂದು ಒತ್ತಾಯಿಸುತ್ತದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ