ಶಿವಮೊಗ್ಗ ಮಹಾನಗರ ಪಾಲಿಕೆ ನಗರದಲ್ಲಿನ ಆಸ್ತಿಗಳ ತೆರಿಗೆ ಹೆಚ್ಚಿಸಿರುವುದನ್ನು ಕೂಡಲೇ ಹಿಂಪಡೆಯಬೇಕು. ಕಳೆದ ಒಂದೂವರೆ ವರ್ಷದಿಂದ ಜನರು ಕೋವಿಡ್ ನಿಂದಾಗಿ ದುಡಿಮೆ ಇಲ್ಲದೆ ಪರಿತಪಿಸುತ್ತಿದ್ದಾರೆ. ಹಿಂದಿನಿಂದ ತೆರಿಗೆಯನ್ನೇ ಪಾವತಿಸುವುದು ಕಷ್ಟವಾಗಿತ್ತು ಇಂತಹ ಸಂದರ್ಭದಲ್ಲಿ ನಗರ ಪಾಲಿಕೆ ಆಸ್ತಿ ತೆರಿಗೆಯನ್ನು ಹೆಚ್ಚಿಸಲು ಮುಂದಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ವರ್ಷದಿಂದ ಜಾರಿಗೆ ಬರುವಂತೆ ಆಸ್ತಿ ತೆರಿಗೆಯನ್ನು ಶೇಕಡಾ 15 ರಷ್ಟು ಹೆಚ್ಚಿಸಲಾಗಿದೆ ಇದರ ಜತೆಗೆ ಪ್ರತಿ ವರ್ಷ ಶೇಕಡಾ 5 ರಷ್ಟು ತೆರಿಗೆ ಹೆಚ್ಚಿಸಲಾಗಿದೆ ಅದರಲ್ಲೂ ಅವೈಜ್ಞಾನಿಕವಾಗಿ ನಿಗದಿಯಾದ ನಗರದ ಆಸ್ತಿಗಳ ಸಬ್ ರಿಜಿಸ್ಟರ್ ಮೌಲ್ಯವನ್ನು ಆಧರಿಸಿ ಆಸ್ತಿ ತೆರಿಗೆಯನ್ನು ಸಂಗ್ರಹ ಮಾಡುತ್ತಿರುವುದು ನಾಗರಿಕರಿಗೆ ಹೊರೆಯಾಗುತ್ತಿದೆ.ಮುದ್ರಾಂಕ ಶುಲ್ಕ ಹೆಚ್ಚು ಸಂಗ್ರಹದ ಆಗಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರತಿ 2ವರ್ಷಕ್ಕೊಮ್ಮೆ ಆಸ್ತಿ ಮೌಲ್ಯವನ್ನು ಪರಿಷ್ಕರಿಸುತ್ತದೆ ಇದನ್ನು ಆಧರಿಸಿ ವಸತಿ ಮತ್ತು ವಾಣಿಜ್ಯ ಕಟ್ಟಡ ತೆರಿಗೆಯನ್ನು ಸರಿಯಲ್ಲ. ಕೆಲವು ಪ್ರತಿಷ್ಠಿತ ಬಡಾವಣೆಯಲ್ಲಿ ಪೂರ್ವಜರು ಮಾಡಿದ ಆಸ್ತಿಯನ್ನು ಅನುಭೋಗ ಮಾಡುತ್ತ ಬದುಕು ಸಾಗಿಸುವವರು ದುಬಾರಿ ತೆರಿಗೆ ಪಾವತಿಸುವುದಾದರೂ ಹೇಗೆ? ನಗರವನ್ನು ಸ್ಮಾರ್ಟ್ ಸಿಟಿ ವಾರ್ಡ್ ಮಾಡುವ ಹೆಸರಿನಲ್ಲಿ ನಡೆಯುತ್ತಿರುವ ಕಳಪೆ ಮತ್ತು ದುಂದು ವೆಚ್ಚದ ಕಾಮಗಾರಿಗಳನ್ನು ನಿಲ್ಲಿಸಿ ಹೊಸ ಕಾಮಗಾರಿ ಕೈಗೊಳ್ಳದೆ ಅದೇ ಕಣವನ್ನು ಆಸ್ತಿತೆರಿಗೆ ಖಾತೆಗೆ ಜಮಾ ಮಾಡಿಕೊಂಡು ಜನತೆಗೆ 2ವರ್ಷದ ತೆರಿಗೆ ಪಾವತಿಯಿಂದ ವಿನಾಯಿತಿ ನೀಡುವಂತೆ ಆಗ್ರಹಿಸುತ್ತದೆ.ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸಿ ನಾಗರಿಕ ಹಿತರಕ್ಷಣಾ ಒಕ್ಕೂಟ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವನ್ನು ಘೋಷಿಸುತ್ತೇವೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ