2005-06 ನೇ ಸಾಲಿನ ಶಿಕ್ಷಕರ ನೇಮಕಾತಿ ಅಧಿಸೂಚನೆ ಅನ್ವಯ ನೇಮಕಗೊಂಡ ಶಿವಮೊಗ್ಗ ಜಿಲ್ಲಾ ಶಿಕ್ಷಕರು NPS ರದ್ದುಪಡಿಸಿ OPS ಹಳೆಯ ಪಿಂಚಣಿ ಜಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಮಾನ್ಯ ಶ್ರೀಯುತ ಷಡಕ್ಷರಿ ಸಿ.ಎಸ್.ಅವರಿಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಯುತ ಡಿ .ಬಿ.ರುದ್ರಪ್ಪನವರು ಮಾತನಾಡಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ತಡವಾಗಲು ಕಾರಣ ಅಂಗವಿಕಲ ಅಭ್ಯರ್ಥಿಗಳಿಗೆ ನೀಡಬೇಕಿದ್ದ ಮೀಸಲಾತಿಯಲ್ಲಿ ಸರ್ಕಾರದ ಲೋಪದ ಕಾರಣ ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ನೇಮಕಾತಿ ಪ್ರಕ್ರಿಯೆ ಒಂದು ವರ್ಷ ವಿಳಂಬವಾಗಿ ಶಿಕ್ಷಕರು ಹಳೆಯ ಪಿಂಚಣಿ ಯೋಜನೆಯಿಂದ ವಂಚಿತರಾಗಿದ್ದಾರೆ, ಈ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಪ್ರಸ್ತಾಪಿಸಿದರು. ನಂತರ ರಾಜ್ಯಾಧ್ಯಕ್ಷರಾದ ಶ್ರೀಯುತ ಷಡಕ್ಷರಿಯವರು ಮಾತನಾಡಿ NPS ನಿರ್ಮೂಲನೆ ಸಂಘದ ಬಹುಮುಖ್ಯ ಗುರಿಗಳಲ್ಲೊಂದು. ಖಂಡಿತವಾಗಿ NPS ನಿರ್ಮೂಲನೆ ಮಾಡಿಯೇ ತೀರುತ್ತೇವೆ. ಇದರ ಬಗ್ಗೆ ಸಂಶಯವೇ ಬೇಡ, 2005-06ರಲ್ಲಿ ನೇಮಕವಾಗಿ ಹಳೆಯ ಪಿಂಚಣಿಯಿಂದ ವಂಚಿತರಾದ ಶಿಕ್ಷಕರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿದರು .ಈ ಸಂದರ್ಭದಲ್ಲಿ ಶ್ರೀಮತಿ ಸುಮತಿ ಜಿ. ಸಹಕಾರ್ಯದರ್ಶಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ, ಶ್ರೀ ಮೋಹನ್ ವಿಭಾಗೀಯ ಅಧ್ಯಕ್ಷರು , ಶ್ರೀ ಶಿವಪ್ಪ ಹೆಚ್ ಸಿ , ಶ್ರೀ ಮಂಜುನಾಥ ಆರ್.ಸಿ. ಹಾಗೂ ಶ್ರೀಮತಿ ವಿಲ್ಮಾ ಜಾಯ್ಸ್ ಇವರು ಹಾಜರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153