ಮಂಜುನಾಥ್ ಶೆಟ್ಟಿ…

ಮೈಸೂರು ವಿಶ್ವವಿದ್ಯಾನಿಲಯಕ್ಕೆ ಶಾಶ್ವತ ಸಂಯೋಜನೆಗೊಂಡಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ), ಸಿದ್ದಾರ್ಥನಗರ, ಮೈಸೂರು ಸಂಸ್ಥೆಯಲ್ಲಿ ಮಾಸ್ಟರ್ ಆಫ್ ವಿಜುಯಲ್ ಆರ್ಟ್ಸ್ ನಾಲ್ಕು ಶೈಕ್ಷಣಿಕ ವರ್ಷದ ಎಂಟು ಸೆಮಿಸ್ಟರ್‌ಗಳ ರಾಷ್ಟ್ರೀಯ ಶಿಕ್ಷಣ ಪದ್ದತಿಯ ದೃಶ್ಯ ಕಲೆಯಲ್ಲಿ 2026-27 ನೇ ಶೈಕ್ಷಣಿಕ ಸಾಲಿಗೆ ಪ್ರಥಮ ವರ್ಷದ ಬಿ.ವಿ.ಎ. ಸ್ನಾತಕೋತ್ತರ ಪದವಿ ಪ್ರವೇಶಾತಿಗಾಗಿ ದ್ವಿತೀಯ ಪಿ.ಯು.ಸಿ.ಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಹಾಗೂ ದ್ವಿತೀಯ ಪಿ.ಯು.ಸಿ.ಗೆ ಸಮಾನಾಂತರ ಕೋರ್ಸು ಮಾಡಿರುವ ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.


ಈ ಪದವಿಯಲ್ಲಿ 3ನೇ ಸೆಮಿಸ್ಟರ್ ನಿಂದ ಚಿತ್ರಕಲೆ, ಗ್ರಾಫಿಕ್ಸ್ ಕಲೆ, ಶಿಲ್ಪಕಲೆ, ಅನ್ವಯಕಲೆ, ಕಲಾ ಇತಿಹಾಸ ಮತ್ತು ಛಾಯಾಚಿತ್ರ ಹಾಗೂ ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗಗಳಲ್ಲಿ ವಿಶೇಷ ಅಧ್ಯಯನದ ಸ್ನಾತಕ ಪದವಿಯಾಗಿರುತ್ತದೆ.
ಆಸಕ್ತ ಅಭ್ಯರ್ಥಿಗಳು ಜಾಲತಾಣ https://uucms.karnataka.gov.in ಅಥವಾ https:// www.cavamysore.karantaka.gov.in ಮೂಲಕ ಮೇ 30ರೊಳಗಾಗಿ ಸಲ್ಲಿಸುವುದು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಅರ್ಹತಾ ಪರೀಕ್ಷೆ ಹಾಗೂ ವೈಯುಕ್ತಿಕ ಸಂದರ್ಶನದ ದಿನಾಂಕವನ್ನು ತಿಳಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಈ ಕಾರ್ಯಾಲಯದ ದೂರವಾಣಿ ಸಂಖ್ಯೆ 0821-2438931 ನ್ನು ಸಂಪರ್ಕಿಸುವಂತೆ ಕಾಲೇಜಿನ ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *