ಮಂಜುನಾಥ್ ಶೆಟ್ಟಿ…

ಎನ್ ಎಸ್ ಯು ಐ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ವಿಧ್ಯಾರ್ಥಿಗಳ ಸಮಸ್ಯೆ ಗಳನ್ನು ಬಗೆಹರಿಸುವಂತೆ ವಿಶ್ವವಿದ್ಯಾಲಯದ ಗಮನಕ್ಕೆ ಸಕಾಷ್ಟು ಬಾರಿ
ತಂದರು ಸ್ಪಂದಿಸದೇ ವಿದ್ಯಾರ್ಥಿ ವಿರೋದಿ ನೀತಿ ತೋರುತ್ತಿರುವ ಕುಲಪತಿಗಳ ವಿರುದ್ದ ಹೋರಾಟ ನಡೆಸಿದರು.


ಕುವೆಂಪು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಿರಂತರವಾಗಿ ವಿದ್ಯಾರ್ಥಿ ವಿರೋಧಿ ನಡೆ ಅನುಸರಿಸುತ್ತಿದ್ದು,
ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿರುವ ವಿಶ್ವವಿದ್ಯಾಲಯದ ನಡೆಯನ್ನು ಶಿವಮೊಗ್ಗ ಜಿಲ್ಲಾ
ಎನ್.ಎಸ್.ಯು.ಐ. ಖಂಡಿಸುತ್ತದೆ.
ಕುಲಪತಿಗಳು ಅಧಿಕಾರ ಸ್ವೀಕರಿಸಿದಂದಿನಿಂದಲೂ ವಿಶ್ವವಿದ್ಯಾಲಯದಲ್ಲಿ ಅಧಿಕಾರಿ ವರ್ಗದವರ
ಆಂತರಿಕ ಕಚ್ಚಾಟದಲ್ಲೇ ತೊಡಗಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಕಳೆದ ೫ ತಿಂಗಳ
ಹಿAದೆ ಪರೀಕ್ಷೆ ಬರೆದಿದ್ದ 1.3ಮತ್ತು 5ನೇ ಸಿಮೆಸ್ಟರ್ ಗಳ ಫಲಿತಾಂಶ ಪ್ರಕಟಿಸಿಲ್ಲ. ಇತ್ತೀಚೆಗೆ ನಡೆದ ಪರೀಕ್ಷೆಗಳ ಮೌಲ್ಯಮಾಪನವನ್ನು ಉಪನ್ಯಾಸಕರಿಗೆ ಮೌಲ್ಯಮಾಪನದ ಗೌರವಧನ ನೀಡದೇ ಇರುವುದರಿಂದ ಉಪನ್ಯಾಸಕರು ಮೌಲ್ಯಮಾಪನವನ್ನು ಬಹಿಷ್ಕರಿಸಿದ್ದಾರೆ.


ಅಲ್ಲದೇ 3 ವರ್ಷಗಳಿಂದ ಯಾವುದೇ ಪರೀಕ್ಷೆಗಳ ಅಂಕಪಟ್ಟಿಯನ್ನು ವಿತರಿಸದೇ ಅಂಕಪಟ್ಟಿಗಳನ್ನು
ಮುದ್ರಿಸಲು ಟೆಂಡರ್ ಕರೆಯುವುದಾಗಿ ಹೇಳುತ್ತಲೇ ಬರಲಾಗುತ್ತಿದೆ. ಇದರಿಂದಾಗಿ ಪದವಿ ಪೂರೈಸಿದ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಲು, ಉದ್ಯೋಗ ಕಂಡುಕೊಳ್ಳಲು ಆಗುತ್ತಿಲ್ಲ. ಪದವಿ ಪೂರೈಸಿದ
ವಿದ್ಯಾರ್ಥಿಗಳಿಗೆ ಪಾಸಿಂಗ್ ಸರ್ಟಿಫಿಕೇಟ್ ಅಥವಾ ಪದವಿ ಪ್ರಮಾಣ ಪತ್ರ ನೀಡುತ್ತಿಲ್ಲ. ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ನೀಡುವಂತೆ ಜಿನ್ಯುಯೆನ್ ಸರ್ಟಿಫಿಕೇಟ್ ಕೊಡದೇ ಇರುವುದರಿಂದಾಗಿ ಕುವೆಂಪು ವಿವಿಯಲ್ಲಿ ವ್ಯಾಸಂಗ ಮಾಡಿದವರಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಸಿಗುವುದು ಕಷ್ಟವಾಗುತ್ತಿದೆ.


ವಿಶ್ವವಿದ್ಯಾಲಯದ ಆಂತರಿಕ ಕಚ್ಚಾಟದಿಂದಾಗಿ ಕಳೆದೆರಡು ವರ್ಷ ಗಳಿಂದ ಘಟಿಕೋತ್ಸವ
ಸಮಾರಂಭವನ್ನು ಸಹ ಏರ್ಪಡಿಸದೇ ವಿವಿಯ ಮಾನ ಹರಾಜಿಗಿಡಲಾಗಿದೆ. ಕಳೆದ ಬಾರಿ ವಿವಿಯ ವೆಬ್ ಸೈಟ್‍ ನಲ್ಲಿ ಪ್ರಕಟಿಸಿದ್ದ ಫಲಿತಾಂಶ ಸಾಕಷ್ಟು ಗೊಂದಲಕ್ಕೀಡು ಮಾಡಿತ್ತು. ನೂರಾರು ವಿದ್ಯಾರ್ಥಿಗಳ ಫಲಿತಾಂಶ ಒಂದು ಬಾರಿ ಪಾಸ್ ಎಂದು ತೋರಿಸಿದ್ದರೆ ಮತ್ತೊಂದು ಬಾರಿ ಫೇಲ್ ಎಂದು ತೋರಿಸುತ್ತಿತ್ತು. ಇದರಿಂದಾಗಿ
ವಿದ್ಯಾರ್ಥಿಗಳು ಗೊಂದಲಕ್ಕೀಡಿ ಆತಂಕಕ್ಕೊಳಗಾಗಿದ್ದಾರೆ.


ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಸಾಕಷ್ಟು ಬಡ ಮತ್ತು ಮದ್ಯಮ ವರ್ಗದ ವಿದ್ಯಾರ್ಥಿಗಳು ಓದುತಿದ್ದು ಶುಲ್ಕದ ಹೆಸರಿನಲ್ಲಿ ಏಕಾ ಏಕಿ ಸಾವಿರಾರು ರುಪಾಯಿ ಪರೀಕ್ಷಾ ಶುಲ್ಕ ಹಾಗು ಪ್ರವೇಶ ಶುಲ್ಕ ದ ಹೆಸರಿನಲ್ಲಿ ಬಡ
ಮತ್ತು ಮದ್ಯಮ ವರ್ಗದ ವಿದ್ಯಾರ್ಥಿಗಳಿಂದ ಸುಲಿಗೆಗೆ ಇಳಿದಿರುವುದು ಖಂಡನೀಯ.
ಕೂಡಲೇ ರಾಜ್ಯಪಾಲರು ಆಂತರಿಕ ಕಚ್ಚಾಟದಲ್ಲಿ ತೊಡಗಿರುವ ಕುಲಪತಿಗಳಿಗೆ. ವಿದ್ಯಾರ್ಥಿಗಳ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲು ಸೂಚನೆ ನೀಡಿ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ
ಅವ್ಯವಸ್ಥೆ ಸರಿಪಡಿಸಿ, ಅಕ್ರಮಗಳನ್ನು ತಡೆಯುವ ಕೆಲಸವನ್ನು ಮಾಡುವಂತೆ ಎಚ್ಚರಿಕೆ ನೀಡಬೇಕು ಎಂದರು.


ಬೇಡಿಕೆಗಳು…


➢ ಕಳೆದ 5ತಿಂಗಳ ಹಿಂದೆ ನಡೆದಿದ್ದ 1.3 ಮತ್ತು 5ನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ
ಪ್ರಕಟಿಸಬೇಕು. ಪದವಿ ಪ್ರಮಾಣ ಪತ್ರ, ಅಂಕಪಟ್ಟಿ, ಜೆನ್ಯೂಯೆನ್ ಸರ್ಟಿಫಿಕೇಟ್ ವಿತರಣೆ ಮಾಡಬೇಕು
➢ ಏಕಾ ಏಕಿ ಏರಿಸಿರುವ ಸಾವಿರಾರು ರುಪಾಯಿ ಪರೀಕ್ಷಾ ಶುಲ್ಕ ಹಾಗು ಪ್ರವೇಶ ಶುಲ್ಕವನ್ನು
ಇಳಿಸಬೇಕು
➢ ಡಿಜಿಟೆಲ್ ಮೌಲ್ಯಮಾಪನದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಕೂಡಲೇ ಡಿಜಿಟೆಲ್
ಮೌಲ್ಯಮಾಪನವನ್ನು ಕೈಬಿಡಬೇಕು
➢ ಭ್ರಷ್ಟಾಚಾರದ ಆರೋಪ ಹಾಗು ವಿಶ್ವ ವಿದ್ಯಾಲಯದಲ್ಲಿ ಕಳಂಕ ಹೊತ್ತಿರುವ ಎಲ್ಲಾ ಅಧಿಕಾರಿಗಳನ್ನೂ
ತಕ್ಷಣ ವಜಾ ಮಾಡಬೇಕು
➢ ಯು.ಯು.ಸಿ.ಎಮ್.ಎಸ್ ನಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳಿಗೆ ಸೂಕ್ತ ಪರಿಹಾರ
ವದಗೆಸಬೇಕು
➢ ವಿವಿ ಯಲ್ಲಿನ ತಾಂತ್ರಿಕ ತೊಂದರೆಗಳಿಗೆ ಸರ್ಕಾರವನ್ನು ದೂರದೆ ಸರಿಪಡಿಸುವ ವ್ಯವಸ್ಥೆ ಮಾಡಬೇಕು
➢ 2021-22ರ ದೂರಶಿಕ್ಷಣ ವಿದ್ಯಾರ್ಥಿಗಳ ಪರೀಕ್ಷೆ ಮತ್ತು ಅಂಕಪಟ್ಟಿ ಹಾಗು ಪಲಿತಾಂಶದ ಬಗ್ಗೆ ಕೂಡಲೆ
ಗಮನಹರಿಸಬೇಕು
➢ ವಿವಿ ವ್ಯಾಪ್ತಿಗೊಳಪಡುವ ಎಲ್ಲಾ ಕಾಲೇಜುಗಳಲ್ಲಿ ಹಾಗು ಹಾಸ್ಟೆಲ್‌ಗಳಲ್ಲಿ ಮೂಲಭೂತ ಸೌಕರ್ಯಗಳನ್ನು
ಸರಿಪಡಿಸಬೇಕು.
➢ ವಿವಿಯ ಎಲ್ಲಾ ಕಾಲೇಜುಗಳಿಗೆ ಕಂಪ್ಯೂಟರ್ ಹಾಗೂ ಲ್ಯಾಬ್ ವ್ಯವಸ್ಥೆ ಮಾಡಬೇಕು.
➢ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿ ವ್ಯವಸ್ಥೆ
ಮಾಡಬೇಕು.
ಎಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ N S U I ನ ಜಿಲ್ಲಾಧ್ಯಕ್ಷರಾದ ವಿಜಯ್ ಕಾರ್ಯಧ್ಯಕ್ಷರಾದ ರವಿ ಕಟಿಕೆರೆ ನಗರಾಧ್ಯಕ್ಷರಾದ ರವಿ ಯುವ ಮುಖಂಡರಾದ ಮುರುಗೇಶ್ ನಗರ ಉಪಾಧ್ಯಕ್ಷರಾದ ಆದಿತ್ಯ ಸುಭಾನ್ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರೋಜಿ ರಾವ್ ವರುಣ್ ಅಭಿ ಫರಾಜ್ ಸೃಜನ್ ಚೇತನ್, ಧನುಷ್, ಸೃಜನ್ ಲೋಹಿತ್, ಆಕಾಶ್, ಹಾಲಸ್ವಾಮಿ, ವಿಕಾಸ್ ಯೂಸುಫ್. ರಿಹಾನ್. ಸಾದ್ ಉಲ್ಲಾ. ಇಸ್ಮಾಯಿಲ್. ಅರ್ಮಾನ್. ರಯಾನ್. ಅಡೀಬ್. ರಿಜ್ವಾನ್. ಆಶಿಕ್. ವಾಸೀಮ್. ರಿಹಾನ್. ಅಜೀಂ. ಅರ್ಮಾನ್. ಸಲ್ಮಾನ್
ದೃಶ್ಯ , ಲೋಹಿತ್ , ಯಶಸ್ , ಉಮೇಶ್ , ಅಂತೋನಿ , ಹೇಮಂತ್ , ತರುಣ್ , ವಿವೇಕ್ , ಸಂದೇಶ್ , ಮಿಥುನ್ , ನವೀನ್ , ಅಶೋಕ್ , ನಿಖಿಲ್ , ಚಂದನ್ , ವಿನಯ್ , ಮನೀಶ್ ಶ್ರೀಕಾಂತ್ ಪ್ರಜ್ವಲ್,ಪಂಕಜ್ ಪ್ರಭು,ಪ್ರಮೋದ್, ಸುನಿಲ್,ಪ್ರೀತಮ್, ಕುಮಾರ್
ಹಾಗೂ ನೂರಾರು ವಿದ್ಯಾರ್ಥಿ ನಾಯಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *