ನಗರ ಮಹಿಳಾ ಮೋರ್ಛಾ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಊರಗಡೂರಿನ ಗುಡ್ಡೇಮರಡಿಯ ಮಲ್ಲೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ ಹಾಗೂ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಪತ್ನಿ ಜಯಲಕ್ಷ್ಮೀಯವರೊಂದಿಗೆ ಸಭೆಗೆ ಅಗಮಿಸಿದ್ದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಯುತ ಕೆ.ಎಸ್.ಈಶ್ವರಪ್ಪರವರು ಮಾತನಾಡಿ, ಮಹಿಳಾ ಮೋರ್ಛಾವನ್ನು ಮತ್ತಷ್ಟು ಬಲಗೊಳಿಸಿ, ಮಹಿಳಾ ಕಾರ್ಯಕರ್ತರ ಕಾರ್ಯವೈಖರಿ ಸದಾ ಮಾದರಿ, ಸಂಘಟನೆಯ ಬಲ ವರ್ಧನೆಗೆ ಪೂರಕ ಎಂದು ಹೇಳಿದರು. ಶ್ರೀಯುತ ಚೆನ್ನಬಸಪ್ಪರವರು ಪಕ್ಷದ ಇತಿಹಾಸ, ನಡೆದು ಬಂದ ದಾರಿ, ಕಾರ್ಯಕರ್ತರ ಜವಾಬ್ದಾರಿ ಬಗ್ಗೆ ಭೌದ್ಧಿಕ್ ನಡೆಸಿಕೊಟ್ಟರು. ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಮೋರ್ಛಾ ನಗರಾಧ್ಯಕ್ಷೆ ಶ್ರೀಮತಿ ಸುರೇಖ ಮುರಳೀಧರ್ ವಹಿಸಿದ್ದರು. ನಗರಾಧ್ಯಕ್ಷರಾದ ಶ್ರೀ ಜಗದೀಶ್ ರವರು, ನಿಕಟಪೂರ್ವ ನಗರಾಧ್ಯಕ್ಷರಾದ ನಾಗರಾಜ್, ಪಾಲಿಕೆ ಸದಸ್ಯರಾದ ಜ್ಞಾನೇಶ್ವರ್, ಮಾಜಿ ಮಹಾಪೌರರಾದ ಶ್ರೀಮತಿ ಸುವರ್ಣ ಶಂಕರ್, ಮಹಿಳಾ ಮೋರ್ಛಾ ಜಿಲ್ಲಾಧ್ಯಕ್ಷೆ ಶ್ರೀಮತಿ ವಿದ್ಯಾ ಲಕ್ಷ್ಮೀಪತಿ, ನಗರ ಪ್ರಭಾರಿ ರಾಧಾ ರಾಮಚಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿ ಶ್ರೀನಿವಾಸ್, ಶ್ರೀಮತಿ ಆರತಿ ಪ್ರಕಾಶ್, ಮಹಿಳಾ ಮೋರ್ಛಾ ಪದಾಧಿಕಾರಿಗಳು, ಸದಸ್ಯರು, ವಿವಿಧ ವಾರ್ಡ್ ನ ಮಹಿಳಾ ಮೋರ್ಛಾ ಅಧ್ಯಕ್ಷೆ ಹಾಗೂ ಕಾರ್ಯದರ್ಶಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153