ಮಂಜುನಾಥ್ ಶೆಟ್ಟಿ…
ಮೈಸೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ ಬ್ಯಾಚುರಲ್ ಆಫ್ ವಿಜ್ಯುಯಲ್ ಆರ್ಟ್ಸ್ ನಾಲ್ಕು ವರ್ಷದ ಎಂಟು ಸೆಮಿಸ್ಟರ್‌ಗಳ ರಾಜ್ಯ ಶಿಕ್ಷಣ ಪದ್ಧತಿಯಲ್ಲಿ 2026-27 ನೇ ಶೈಕ್ಷಣಿಕ ಸಾಲಿಗೆ ದ್ವಿತೀಯ ಪಿ.ಯು.ಸಿ. ಸಮಾನಾಂತರ ಕೋರ್ಸುಗಳಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಂದ ಪ್ರಥಮ ವರ್ಷದ ಬಿ.ವಿ.ಎ. ದೃಶ್ಯ ಕಲೆಯಲ್ಲಿ ಸ್ನಾತಕ ಪದವಿಗಳಾದ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಅನ್ವಯಕಲೆ, ಕಲಾ ಇತಿಹಾಸ, ಛಾಯಾಚಿತ್ರ ಹಾಗೂ ಛಾಯಾಚಿತ್ರ ಪತ್ರಿಕೋಧ್ಯಮ ವಿಭಾಗಗಳಲ್ಲಿ ಪದವಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು https;//uucms.karnataka.gov.in ಆನ್‌ಲೈನ್ ಮೂಲಕ ಜೂ. 12 ರೊಳಗಾಗಿ ಸಲ್ಲಿಸುವುದು. ಪ್ರವೇಶಾತಿ ಕೋರಿ ಅರ್ಜಿಸಲ್ಲಿಸಿದ ಅಭ್ಯರ್ಥಿಗಳನ್ನು ಆಯ್ಕೆಮಾಡಲು ಅರ್ಹತಾ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನವನ್ನು ಜೂ.15 ರಂದು ನಡೆಸಲಾಗುವುದು ಎಂದು ಕಾಲೇಜಿನ ಡೀನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.