ಮಂಜುನಾಥ ಶೆಟ್ಟಿ…

ನಮ್ಮೂರ ಬಳಗದಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ – ಕೆಂಪೇಗೌಡರ ದೂರದೃಷ್ಟಿಯ ಮತ್ತು ಜಾತ್ಯತೀತ ಆಡಳಿತದ ವೈಭವ ನಮಗೆಲ್ಲ ಸದಾ ಪ್ರೇರಣೆ – ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ ಶ್ರೀಕಾಂತ್

ರಾಜ್ಯದ ರಾಜಧಾನಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವವನ್ನು ನಮ್ಮೂರ ಬಳಗದ ವತಿಯಿಂದ ಅಲ್ಲಮಪ್ರಭು ಮೈದಾನ, ಫ್ರೀಡಂ ಪಾರ್ಕ್ ನಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ , ಸಿಹಿ ವಿತರಿಸಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಮ್. ಶ್ರೀಕಾಂತ್ ರವರು ಮಾತನಾಡಿ ವಿಜಯನಗರ ಸಾಮ್ರಾಜ್ಯದ ಧೀಮಂತ ನಾಯಕ, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಎಲ್ಲಾ ಜಾತಿ, ಧರ್ಮ, ಮತ, ಪಂಥ, ಭಾಷೆಯ ಜನರಿಗೆ ಆಶ್ರಯ ನೀಡಿ, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವ ಬೆಂಗಳೂರು ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಫಲ. ಕೆಂಪೇಗೌಡರ ಜನಪರವಾದ ಜಾತ್ಯತೀತ ಆಡಳಿತ ನಮಗೆ ಮಾದರಿ. ಇವರ ದೂರದೃಷ್ಟಿಯ ಮತ್ತು ಸಮುದಾಯ ಕೇಂದ್ರಿತ ಆಡಳಿತದ ವೈಭವ ಇಂದಿನ ಪೀಳಿಗೆಗೆ ಪ್ರೇರಣೆಯಾಗಿದೆ. ಭವ್ಯ ಪರಂಪರೆಯ ಗೌರವ ಹಾಗೂ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಮೂಡಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.

ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ .ರಂಗನಾಥ್, ಗೌರವ ಸಂಚಾಲಕರಾದ ಹೆಚ್ ಪಾಲಾಕ್ಷಿ ,ಸಿ ರವಿ ,ಜಿ.ಡಿ ಮಂಜುನಾಥ್, ಹಾಪ್ ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ, ಸಿಟಿ ಬ್ಯಾಂಕ್ ನಿರ್ದೇಶಕ ಬಿ ಲೋಕೇಶ್, ಸಂಚಾಲಕರಾದ ಹೆಚ್‌.ಪಿ ಗಿರೀಶ್, , ಚಂದ್ರು ಗೆಡ್ಡೆ, ಗುರುಪ್ರಸಾದ್, ಎಸ್ ಬಸವರಾಜ್, ವಿನಯ್, ಸುಬ್ರಮಣಿ,ಕುಮಾರ್, ಕೇಬಲ್ ಲೋಕೇಶ್, ಕೆ ಎಲ್ ಪವನ್, ರಾಜೇಶ್ ಮಂದಾರ, ಮಿಥುನ್, ಪುಷ್ಪಕ್ ಕುಮಾರ್ ,ಶಿವಮೊಗ್ಗ ವಿರೂಪಾಕ್ಷ, ಭವಾನಿ ರಾವ್, ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *