ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡದೇ ಇರುವ ಖಾಸಗಿ ಶಾಲೆಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಕರುನಾಡ ಯುವ ಶಕ್ತಿ ಸಂಘಟನೆ ಗ್ರಹಿಸುತ್ತದೆ. 18 ತಿಂಗಳ ನಂತರ ಶಾಲೆ ಕಾಲೇಜುಗಳು ಆರಂಭವಾಗಿವೆ. ಕೋವಿಡ್ ಸಂಕಷ್ಟಕ್ಕೆ ಸಿಲುಕಿದ ಅನೇಕ ಪೋಷಕರು ಖಾಸಗಿ ಶಾಲಾ ಕಾಲೇಜುಗಳಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಅಲ್ಲಿನ ದುಭಾರಿ ಶುಲ್ಕಗಳನ್ನು ಕಟ್ಟಲಾಗದ ಅನೇಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿಲ್ಲ. ಶುಲ್ಕ ಕಟ್ಟದೆ ಖಾಸಗಿ ಶಾಲೆಗಳು ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುತ್ತಿಲ್ಲ. ಪೋಷಕರು ನಮಗೆ ಟಿ.ಸಿ ಕೊಟ್ಟು ಬಿಡಿ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತೇವೆ ಎಂದು ಮನವಿ ಮಾಡಿದರು ಕೂಡ ಇತ್ತ ಟಿ.ಸಿಯನ್ನು ಕೊಡದೆ, ಶಾಲೆ ಸೆರಿಸಿಕೊಳ್ಳದೆ ಖಾಸಗಿ ಶಾಲೆಗಳು ಕಿರುಕುಳ ನೀಡುತ್ತಿವೆ. ಟಿ.ಸಿ ಕೊಡಲೇ ಬೇಕು ಎಂದರೆ ಇದುವರೆಗೂ ಆನ್ ಲೈನ್ ಕ್ಲಾಸ್ ನಡೆಸಿದ್ದೇವೆ. ಶಿಕ್ಷಕರಿಗೆ ಸಂಬಳ ಕೊಡುತ್ತಿದ್ದೇವೆ. ಶಾಲೆಗಳನ್ನು ಆರಂಭಿಸಿದ್ದೇವೆ ಹಾಗಾಗಿ ನಾವು ವಿಧಿಸಿದ ಶುಲ್ಕವನ್ನು ಕೊಟ್ಟರೆ ಮಾತ್ರ ಟಿ.ಸಿ ಕೊಡುತ್ತೇವೆ.ಇಲ್ಲದಿದ್ದರೆ ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಿದ್ದಾರೆ. ಕೋವಿಡ್ ಲಾಕ್ ಡಾನ್ ನಂತರ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಜೀವನವನ್ನೇ ಕಳೆದುಕೊಂಡ ಪೋಷಕರಿಗೆ ಈಗ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸರ್ಕಾರಿ ಶಾಲೆಗೆ ಸೇರಿಸೋಣ ಎಂದರೆ ಈ ಖಾಸಗಿ ಶಾಲೆಗಳ ಹಠಮಾರಿತನದ ಧೋರಣೆ ಅವರ ನಿದ್ದೆಗೆಡಿಸಿದೆ ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ಮಾಡಿ ಮನವಿ ಮಾಡಿದ್ದಾರೆ. ಶಿಕ್ಷಣಾಧಿಕಾರಿಗಳು ಕೂಡ ಹೇಗೋ ಹೊಂದಿಕೊಳ್ಳಿ ಎಂದು ಖಾಸಗಿ ಶಾಲೆಗಳ ಪರವಾಗಿ ಮಾತನಾಡಿ ವಾಪಸ್ ಕಳುಹಿಸುತ್ತಿದ್ದಾರೆ. ನಮ್ಮ ಮನವಿಗೆ ಅವರು ಸ್ಪಂದಿಸುವುದೇ ಇಲ್ಲ ಎಂದು ಅನೇಕ ಪೋಷಕರು ಈಗಾಗಲೇ ದೂರಿದ್ದಾರೆ.ಆದ್ದರಿಂದ ತಾವು ಮಧ್ಯ ಪ್ರವೇಶ ಮಾಡಿ ಟಿಸಿ ಕೊಡದ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಸರ್ಕಾರಿ ಶಾಲೆಗಳಲ್ಲಿ ಈಗ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಸರಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಬೇಕು. ಖಾಸಗಿ ಶಾಲೆಗಳಲ್ಲಿ ಮಕ್ಕಳ ಶುಲ್ಕ ಯಷ್ಟೇ ಬಾಕಿ ಇರಲಿ ಅದನ್ನು ಮನ್ನಾ ಮಾಡಿ ಟಿಸಿ ಕೊಡಿಸುವಂತೆ ನಿರ್ದೇಶನ ಮಾಡಬೇಕು ಖಾಸಗಿ ಶಾಲೆಗಳಲ್ಲಿ ಮಕ್ಕಳ ಶುಲ್ಕ ಯಷ್ಟೇ ಬಾಕಿ ಇರಲಿ ಅದನ್ನು ಮನ್ನಾ ಮಾಡಿ ಟಿ.ಸಿ ಕೊಡಿಸುವಂತೆ ನಿರ್ದೇಶನ ನೀಡಬೇಕು. ಅಥವಾ ನೇರವಾಗಿ ಬಿ .ಇ .ಓ ಕಚೇರಿಯಿಂದಲೇ ಟಿಸಿ ನೀಡಬೇಕು ಎಂದು ಅಖಿಲ ಭಾರತ ಕರುನಾಡ ಯುವ ಶಕ್ತಿ ಸಂಘಟನೆ ಪೋಷಕರೊಂದಿಗೆ ಆಗ್ರಹಿಸುತ್ತದೆ. ಸಂಸ್ಥಾಪಕ ಅಧ್ಯಕ್ಷರು ಎಸ್ ವಸಂತ್ ಕುಮಾರ್, ರಾಜ್ಯ ಯುವ ಘಟಕದ ಅಧ್ಯಕ್ಷ ಎ ಎಸ್ ಚಿದಾನಂದ, ಶಿವಮೊಗ್ಗ ನಗರ ಉಪಾಧ್ಯಕ್ಷರು ಟಿ ಆರ್ ಪ್ರಜ್ವಲ್, ನಂದೀಶ್ ಕುಮಾರ್, ಅಶ್ವಿನ್, ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153