ಅವನು ಯಾರಿಗೂ
ಕರಗದ ಮನದವ
ಇವಳ ಮುಗ್ದ ನೋಟಕ್ಕೆ
ಬರಹದ ಮಾಟಕ್ಕೆ
ಅವಳ ಅರಿಯದೆಯೇ
ಕರಗಿಹೋದವನು..
ಕಲ್ಲೆದೆಯ ಕರಗಿಸಿ
ಬಿಟ್ಟಳವಳು…
ಯಾವ ಮೋಡಿಯು
ಮಾಡದೇ….
ಯಾವ ಬಿಂಕವ ತೋರದೆ
ಅವಳ ಮೊದಲ
ನೋಟಕೆ ಕರಗಿಹೋದನಿವನು
ಕಲ್ಲಾದ ಹೃದಯದಲ್ಲಿ
ನೂರು ಕಲ್ಪನೆಯ ಚಿತ್ತಾರ
ಜೀವನೋತ್ಸಾಹ ತುಂಬಿದ
ಭಾವಗಳ ಮಧುರ ಹಂದರ
ಸೂಜಿಗಲ್ಲಿನಂತೆ ಆಕರ್ಷಿಸಿ
ಬಿಟ್ಟಳವಳು…
ಕಲ್ಲೆದೆಯ ಕರಾಗಿಸಿದಾಕೆ
ಈಗ….ಮನದರಸಿ
ಏನೆಂದು…..ಹೇಳಲಿ
ಅವಳ ತುಂಟ ನಗೆಗೆ
ಅವಳ ಕಣ್ಣೋಟಕ್ಕೆ…
ನಾ ಕರಗಿ ಹೋದದ್ದಷ್ಟೇ ಗೊತ್ತು.
ಅನಿರಾ.

CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153