ಮಂಜುನಾಥ ಶೆಟ್ಟಿ…

ಜೆಸಿಐ ಶಿವಮೊಗ್ಗ ಸ್ಟಾರ್ಸ್ ವತಿಯಿಂದ ನಗರದಲ್ಲಿ ಪರಿಣಾಮಕಾರಿ ಸಾರ್ವಜನಿಕ ಭಾಷಣ (Effective Public Speaking – EPS) ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ತರಬೇತುದಾರರಾಗಿ ಜೆಸಿ ನಂಜುಂಡ ಹಾಗೂ ಜೆಸಿ ವಿಲಿಯಂ ಡಿಸೋಜಾ ಭಾಗವಹಿಸಿ, ಪರಿಣಾಮಕಾರಿ ಭಾಷಣ ಕೌಶಲ್ಯ, ಆತ್ಮವಿಶ್ವಾಸ, ವೇದಿಕೆ ನಿರ್ವಹಣೆ ಹಾಗೂ ವ್ಯಕ್ತಿತ್ವ ವಿಕಸನ ಕುರಿತು ಸಮಗ್ರ ತರಬೇತಿ ನೀಡಿದರು. ಅವರ ಅನುಭವಾಧಾರಿತ ಮಾರ್ಗದರ್ಶನವು ಸದಸ್ಯರಿಂದ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದ ನಿರ್ದೇಶಕರಾಗಿ ಜೆಸಿ ನವೀನ್ ತಲಾರಿ ಕಾರ್ಯನಿರ್ವಹಿಸಿದರು.ಕಾರ್ಯಕ್ರಮದ ಯಶಸ್ಸಿಗೆ ಅಧ್ಯಕ್ಷೆ ಜೆಸಿ ಪ್ರಿಯಾಂಕಾ ಅವರ ಸಮರ್ಥ ನಾಯಕತ್ವ, ಶ್ರಮ ಹಾಗೂ ಸಂಘಟನಾ ಕೌಶಲ್ಯ ಪ್ರಮುಖ ಕಾರಣವಾಗಿದ್ದು, ಸದಸ್ಯರು ಅವರನ್ನು ಅಭಿನಂದಿಸಿದರು.


ಸಂಸ್ಥೆಯ ಸ್ಥಾಪಕ ಅಧ್ಯಕ್ಷೆ ಜೆಸಿ ಅಶ್ವಿನಿ ಅವರು ನಿರಂತರ ಮಾರ್ಗದರ್ಶನ ಹಾಗೂ ಬೆಂಬಲ ನೀಡಿದರೆ, ಕಾರ್ಯದರ್ಶಿ ಜೆಸಿ ಪೂಜಾ ಅವರು ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಅತ್ಯುತ್ತಮ ಸಮನ್ವಯ ಸಾಧಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಅವರ ನಾಯಕತ್ವದ ಗುಣಗಳು ಭವಿಷ್ಯದ ಸಮರ್ಥ ಜೆಸಿಐ ನಾಯಕಿಯ ಭರವಸೆಯನ್ನು ಮೂಡಿಸಿವೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಸದಸ್ಯರು ತರಬೇತಿಯು ತಮ್ಮ ಸಾರ್ವಜನಿಕ ಭಾಷಣ ಕೌಶಲ್ಯ ಹಾಗೂ ನಾಯಕತ್ವ ಸಾಮರ್ಥ್ಯವನ್ನು ವೃದ್ಧಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಜೆಸಿಐ ಶಿವಮೊಗ್ಗ ಸ್ಟಾರ್ಸ್ ವತಿಯಿಂದ ಮುಂದೆಯೂ ಸಮಾಜಮುಖಿ, ನಾಯಕತ್ವ ವಿಕಸನ ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ಗುಣಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಕಲ್ಪ ವ್ಯಕ್ತಪಡಿಸಲಾಯಿತು.

Leave a Reply

Your email address will not be published. Required fields are marked *