ಶಿವಮೊಗ್ಗ ನಗರ, ಗೋಪಾಳ ಗೌಡ ಬಡಾವಣೆ ವಾರ್ಡ ನಂ 6 ರಲ್ಲಿ ಬೀದಿ ಬದಿ ವ್ಯಾಪಾರಸ್ಥರು ಜಿಲ್ಲಾಧ್ಯಕ್ಷರಾದ ಶ್ರೀಯುತ ಚನ್ನವೀರಪ್ಪ ಗಾಮನಗಟ್ಟಿ ರವರಿಗೆ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಬೀದಿ ಬದಿ ವ್ಯಾಪಾರಸ್ಥರ ಸಂಕಷ್ಟಗಳನ್ನು ಕೇಳಿದ ಅಧ್ಯಕ್ಷರು ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಹಾಗೂ ಸಮಾನ ಮನಸ್ಕರ ಉಳಿತಾಯ ಗುಂಪುಗಳ ರಚನೆಯ ಬಗ್ಗೆ ಮಾಹಿತಿ ನೀಡಿದರು, ಸ್ಥಳದ ಸ್ವಚ್ಛತೆ ಕಾಪಾಡಲು ಪಾಲಿಕೆ ನೀಡುವ ಜಾಗದ ಮಿತಿ ಬಿಟ್ಟು ಫುಟ್ ಪಾತ್, ಆಕ್ರಮಿಸಬೇಡಿ ನಗರ ಬಿಸಿಲಿನ ತಾಪದಿಂದ ಕಂಗೆಟ್ಟಿದೆ ಸುತ್ತಲಿನ ಪ್ರದೇಶದಲ್ಲಿ ಹಸರೀಕರಣಕ್ಕೆ, ಕಸ ಮುಕ್ತ ಪ್ರದೇಶ ವಾಗಲು ಮತ್ತು ಲಂಚಮುಕ್ತವಾಗಲು ಸಹಕರಿಸಿ ಎಂದು ಎಲ್ಲಾ ವ್ಯಾಪಾರಸ್ತರಲ್ಲಿ ವಿನಂತಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲರ ಸಮ್ಮುಖದಲ್ಲಿ 6ನೇ ವಾರ್ಡ್ ನ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾಗಿ ಶ್ರೀಮರಿಸ್ವಾಮಿ (ರವಿ)ಯವರನ್ನು ಆಯ್ಕೆ ಮಾಡಲಾಯಿತು. ಈ ಸಮಯದಲ್ಲಿ ಎಲ್ಲಾರಿಗೂ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಅವಿನಾಶ್, ಹಾಗೂ ಬೀದಿ ಬದಿ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153