ಮುಚ್ಚಿದ್ದ ಜ್ಞಾನ ದೇಗುಲಗಳಿಂದು
ತೆರೆಯುತ್ತಲಿದೆ….
ಅಜ್ಞಾನದ ಕತ್ತಲೆ ಆವರಿಸಿದ
ದೀಪಗಳಿಗಿಂದು…
ಬತ್ತಿಗೆ ಎಣ್ಣೆ ಸೋಕಿ
ಬೆಳಗಲು ಪ್ರಾರಂಭಿಸಿದೆ
ಸದಾ ಉರಿಯುತ್ತಿರಲಿ
ಜ್ಞಾನ ದೀವಿಗೆ….
ಕತ್ತಲು ಸರಿದು..ಬೆಳಕು ಹರಿದು
ಮಳೆ ಗಾಳಿಗೆ ಆರದೆ
ಯಾವ ಸೋಂಕಿಗೂ ಜಗ್ಗದೆ
ಮಿನುಗುತ್ತಿರಲಿ ಭವಿತವ್ಯದ ಹಣತೆ
ಮಂಕುಕವಿದ ಜ್ಞಾನವ
ಅಕ್ಕರೆಯಿಂದ ತಿದ್ದಿ ತೀಡಿ
ಬೆಳಗುವಂತೆ ಮಾಡಬೇಕಿದೆ
ಸರಿ ಮಾರ್ಗವ ತೋರಿಸಿ
ಅಡಿಪಾಯವ ಭದ್ರಗೊಳಿಸಿ
ಗಗನಚುಂಬನಕ್ಕೇರಿಸಬೇಕಿದೆ
ಎಂದೂ ಮುಚ್ಚದಿರಲಿ
ಜ್ಞಾನ ದೇಗುಲ….
ಅರಿಯಬೇಕಿದೆ ಅರಿವಿನ
ಅಂತರಾಳ….
ನಾಳೆಯ ಆಶಾಗೋಪುರಗಳನ್ನು
ಪುಟ್ಟಪುಟ್ಟ ಹಣತೆಗಳು ಅಲಂಕರಿಸಬೇಕಿದೆ…..
ಮುಚ್ಚದಿರಲಿ ಜ್ಞಾನ ದೇಗುಲ
ಸದಾ ಬೆಳಗುತ್ತಿರಲಿ ದೀವಿಗೆ.
ಅನಿತಕೃಷ್ಣ
ಶಿಕ್ಷಕಿ.ತೀರ್ಥಹಳ್ಳಿ

CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153