ಮಂಜುನಾಥ ಶೆಟ್ಟಿ…

ಪ್ರಸ್ತುತ ಮಳೆಗಾಲದಲ್ಲಿ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ವಿಶ್ವವಿಖ್ಯಾತ ಜೋಗ್‌ಫಾಲ್ಸ್ ವೀಕ್ಷಣೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಶಿವಮೊಗ್ಗ ವಿಭಾಗವು ವಿಶೇಷ ಪ್ಯಾಕೇಜ್ ಸಾರಿಗೆ ಸೇವೆಯನ್ನು ಆರಂಭಿಸಿದೆ.
ಸಾರ್ವಜನಿಕ ಪ್ರಯಾಣಿಕರು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಪ್ರತಿ ಶನಿವಾರ ಮತ್ತು ಭಾನುವಾರ ಈ ವಿಶೇಷ ಬಸ್ಸುಗಳ ಕಾರ್ಯಾಚರಣೆ ನಡೆಯಲಿದೆ.

ಈ ವಿಶೇಷ ಸಾರಿಗೆಯು ಶಿವಮೊಗ್ಗ ಬಸ್ ನಿಲ್ದಾಣದಿಂದ ಹೊರಟು ಸಿಗಂದೂರು, ವರದಾಮೂಲ, ಇಕ್ಕೇರಿ ಮತ್ತು ಕೆಳದಿ ಮಾರ್ಗವಾಗಿ ಜೋಗ್‌ಫಾಲ್ಸ್‌ಗೆ ತಲುಪಲಿದೆ.
ಶಿವಮೊಗ್ಗದಿಂದ ಹೊರಡುವ ಸಮಯ ಬೆಳಿಗ್ಗೆ 08:00 ಗಂಟೆ, ಜೋಗ್‌ಫಾಲ್ಸ್ ತಲುಪುವ ಸಮಯ ಮಧ್ಯಾಹ್ನ 02 ಗಂಟೆ.
ಜೋಗ್‌ಫಾಲ್ಸ್‌ನಿಂದ ಹಿಂತಿರುಗುವ ಸಮಯ ಸಂಜೆ 05 ಗಂಟೆ. ಶಿವಮೊಗ್ಗ ತಲುಪುವ ಸಮಯ ರಾತ್ರಿ 07:30 ಗಂಟೆ.
ಪ್ರಯಾಣ ದರ: ವಯಸ್ಕರಿಗೆ ರೂ. 450/-
ಮಕ್ಕಳಿಗೆ: ರೂ.250/-
ಮಳೆಗಾಲದಲ್ಲಿ ಸುಂದರ ಜಲಪಾತ ಹಾಗೂ ಸುತ್ತಮುತ್ತಲಿನ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳನ್ನು ವೀಕ್ಷಿಸಲು ಬಯಸುವ ಸಾರ್ವಜನಿಕರು ಹಾಗೂ ಪ್ರವಾಸಿಗರು ಈ ವಿಶೇಷ ಪ್ಯಾಕೇಜ್ ಸಾರಿಗೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಕೆಎಸ್ಆರ್‌ಟಿಸಿ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *