ಮಂಜುನಾಥ ಶೆಟ್ಟಿ…

ಆಂಧ್ರಪ್ರದೇಶ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ
ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ 2026 : ಶಿವಮೊಗ್ಗ ನಾಗರಾಜ್ ಅವರಿಗೆ ಕನ್ಸೋಲೇಶನ್ ಅವಾರ್ಡ್

ಪತ್ರಿಕೆ ಮತ್ತು ವನ್ಯಜೀವಿ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರು ಶಿಕಾರಿಪುರ ದಲ್ಲಿ ಸೆರೆಹಿಡಿದ ” ಹೋರಿ ಹಬ್ಬ” ದ ಛಾಯಾಚಿತ್ರಕ್ಕೆ ಸ್ಪಾಟ್ ನ್ಯೂಸ್ ವಿಭಾಗದಲ್ಲಿ ಕನ್ಸೋಲೇಶನ್ ಅವಾರ್ಡ್ ದೊರಕಿದೆ.

ಅಲ್ಲದೆ ಈ ಚಿತ್ರಕ್ಕ್ಕೆ ಇತ್ತೀಚೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ನಡೆಸಿದ ರಾಷ್ಟ್ರ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದು ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ 2 ದಿನಗಳ ಛಾಯಾಚಿತ್ರ ಪ್ರದರ್ಶಕ್ಕೆ ಆಯೆಯಾಗಿತ್ತು .

ಅಲ್ಲದೆ ಶಿವಮೊಗ್ಗ ನಾಗರಾಜ್ ಅವರು ಕ್ಲಿಕ್ಕಿಸಿದ ಅನೇಕ ಛಾಯಾಚಿತ್ರಗಳ ದೇಶ , ವಿದೇಶಗಳಲ್ಲಿ ಪ್ರದರ್ಶನಗೊಂಡು ಪ್ರಥಮ , ದ್ವಿತೀಯ ಬಹುಮಾನದ ಜೊತೆಗೆ ಚಿನ್ನ , ಬೆಳ್ಳಿ ಪದಕ ಪಡೆಯುವ ಮೂಲಕ ಶಿವಮೊಗ್ಗ ಜಿಲ್ಲೆಗೆ ಹಾಗೂ ಕರ್ನಾಟಕಕ್ಕೆ ವಿಶೇಷ ಗೌರವ ತಂದುಕೊಟ್ಟಿದೆ .
ಇವರು ಪ್ರತಿವರ್ಷ ತಾವು ಚಿತ್ರಿಸಿದ ಛಾಯಾಚಿತ್ರ ಪ್ರದರ್ಶನ ಏರ್ಪಡಿಸುವ ಮೂಲಕ ಜನಜಾಗೃತಿ ಕಾರ್ಯ ನಿರಂತರವಾಗಿ ಮಾಡಿಕೊಂಡು ಬಂದಿರುತ್ತಾರೆ ..

Leave a Reply

Your email address will not be published. Required fields are marked *