ಮಾನ್ಯ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಅಶೋಕ್ ನಾಯಕ್ ರವರು 18- 05-2021 ರಂದು ಜಿ ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಮ್ಮುಖದಲ್ಲಿ ಎಲ್ಲ ಪಿಡಿಒಗಳ ಜತೆ ಚರ್ಚಿಸಿ ಪ್ರೆಸ್ ಮೀಟ್ ನಡೆಸಿ. ಗ್ರಾಮೀಣ ಭಾಗದ ಬಗ್ಗೆ ನಾವು ಗಮನ ಹರಿಸಬೇಕು. ಇನ್ನೆರಡು ದಿನಗಳಲ್ಲಿ 3ಕಡೆ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪಿಸಿ ಗ್ರಾಮಾಂತರ ಭಾಗದಲ್ಲಿ ಇರುವ ಎಲ್ಲಾ ಹೋಮ ಐಸೊಲೇಷನ್ ಇರುವವರನ್ನು ಕೋವಿಡ ಆರೈಕೆ ಕೇಂದ್ರಕ್ಕೆ ಇನ್ನೆರಡು ದಿನದಲ್ಲಿ ಶಿಫ್ಟ್ ಮಾಡುತ್ತೇವೆ ಎಂದು ಹೇಳಿದ್ದರು. ಗ್ರಾಮಾಂತರ ವಿಭಾಗಕ್ಕೆ 3 ಕೋವಿಡ ಆರೈಕೆ ಕೇಂದ್ರ : ಅಶೋಕ್ ನಾಯ್ಕ 1ವಾರ ಕಳೆದರೂ ಕೋವಿಡ ಪೇಷೆಂಟ್ ಗಳನ್ನು ಶಿಫ್ಟ್ ಮಾಡಿಲ್ಲ. ಹೊಸ ಪ್ರಕರಣಗಳಲ್ಲಿ ಮಾತ್ರ ಹೋಮ ಐಸೊಲೇಷನ್ ಕೊಡುತ್ತಿಲ್ಲ. ಆದರೆ ಹಳೆಯ ಕೋವಿಡ ಪೇಷೆಂಟ್ ಗಳನ್ನು ಗ್ರಾಮಾಂತರ ಭಾಗದಿಂದ ಶಿಫ್ಟ್ ಮಾಡದೆ ಇರುವುದು ಎಷ್ಟು ಸಮಂಜಸ? ಗ್ರಾಮಾಂತರ ಭಾಗದಲ್ಲಿ ಹೋಮ ಐಸೊಲೇಷನ್ ಕಷ್ಟ ಎಂದು ಅಂದಿನ ಸಭೆಯಲ್ಲೇ ತೀರ್ಮಾನಿಸಲಾಗಿದ್ದು ಕಾರ್ಯರೂಪಕ್ಕೆ ಬಾರದಿರುವುದು ದುರದೃಷ್ಟಕರ.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ