ಇಂದು ಗ್ರಾಮಾಂತರ MLA ಅಶೋಕ್ ನಾಯಕ್ ರವರು ಗ್ರಾಮಾಂತರ ಟಾಸ್ಕ್ ಫೋರ್ಸ್ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ . ಪತ್ರಿಕಾಗೋಷ್ಠಿಯಲ್ಲಿ ಪಂಚಾಯತ್ ಸಿಇಒ ವೈಶಾಲಿ , ಇಒ ಕಲ್ಲಪ್ಪ ಎಸ್ , ಉಮಾ ಸದಾಶಿವ ನೋಡಲ್ ಆಫೀಸರ್ ಉಪಸ್ಥಿತರಿದ್ದರು . ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಸದಸ್ಯರಾದ ಅಶೋಕ್ ನಾಯ್ಕ ರವರು ಎಲ್ಲಾ ಪಿಡಿಒಗಳಿಗೆ ಪಾಸಿಟಿವ್ ರಿಪೋರ್ಟ್ ಕೇಳಿದರು . ಈ ಸಮಯದಲ್ಲಿ ಯಾರೊಬ್ಬರ ಬಳಿಯೂ ಸಮರ್ಪಕ ಮಾಹಿತಿ ಸಿಗಲಿಲ್ಲ . ಅಲ್ಲದೆ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡನೇ ಡೋಸ್ ಲಸಿಕಾಕರಣ ಪ್ರಾರಂಭವೇ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು . ಪಂಚಾಯತ್ ಸಿಇಒ ವೈಶಾಲಿಯವರು ಕೂಡ ಈ ಸಮಯದಲ್ಲಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು . ಎಲ್ಲಾ ಪಿಡಿಒಗಳಿಗೆ ಅವಶ್ಯ ಮಾರ್ಗದರ್ಶನ ನೀಡಲಾಯಿತು . ಹಲವಾರು ಪಿಡಿಒಗಳೇ ವ್ಯಾಕ್ಸಿನೇಷನ್ ತೆಗೆದುಕೊಂಡಿಲ್ಲ ಎಂಬ ಮಾತು ಕೂಡ ಪ್ರಸ್ತಾವವಾಯಿತು . ಮುಖ್ಯವಾಗಿ ಶಾಸಕರು ಹೋಮ ಐಸೊಲೇಶನ್ ಬಗ್ಗೆ ಚರ್ಚಿಸಿದರು . ಚರ್ಚೆಯ ಬಳಿಕ ಹೋಮ್ ಐಸೊಲೇಷನ್ ಗ್ರಾಮೀಣ ಪ್ರದೇಶಗಳಿಗೆ ಸೂಕ್ತವಲ್ಲ ಎಂಬ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು . ಕೂಡಲೇ ಗ್ರಾಮಾಂತರ ಶಾಸಕರು 3 ಕೋವಿಡ ಕೇರ್ ಸೆಂಟರ್ ಸೂಚಿಸಲು ಹೇಳಿದರು . ಅದರಂತೆ ಸಿಇಒ ವೈಶಾಲಿ ಅವರ ಸಲಹೆಯಂತೆ ಕುಂಸಿಯಲ್ಲಿ 150 ಬೆಡ್ , ಹಕ್ಕಿಪಿಕ್ಕಿ ಕ್ಯಾಂಪ್ 50 ಬೆಡ್ ಹಾಗೂ ಗೋಂದಿ ಚಟ್ನಳ್ಳಿ 100 ಬೆಡ್ ಹಾಸ್ಟೆಲನ್ನು ನಿಯುಕ್ತಿಗೊಳಿಸಿದರು . ಅಲ್ಲದೆ ಗುರುವಾರದಿಂದ ಇಡೀ ಶಿವಮೊಗ್ಗ ಜಿಲ್ಲಾ ಗ್ರಾಮಾಂತರ ತಾಲ್ಲೂಕಿನಲ್ಲಿ ಹೋಮ ಐಸೊಲೇಷನ್ ಅಲ್ಲಿರುವ ಈ ಎಲ್ಲಾ ಕೋವಿಡ ಪೇಷೆಂಟ್ ಗಳನ್ನು ಕೋವಿಡ ಕೇರ್ ಸೆಂಟರ್ ಗೆ ಶಿಫ್ಟ್ ಮಾಡಲು ಸೂಚಿಸಲಾಯಿತು. ಶಿಫ್ಟ್ ಮಾಡಲು ಆಂಬ್ಯುಲೆನ್ಸ್ ಗಳನ್ನು ನಿಯುಕ್ತಿಗೊಳಿಸುವಂತೆ ಟಿಎಚ್ ಒ ಅವರಿಗೆ ಸೂಚಿಸಲಾಯಿತು. ಅಲ್ಲದೆ ಎಲ್ಲ ಪಿಡಿಒಗಳು ವರದಿಗಳನ್ನು ದಿನವಾರು ಹೊಂದಿರಬೇಕೆಂದು ತಾಕೀತು ಮಾಡಿದರು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ
One thought on “ಗ್ರಾಮಾಂತರ ವಿಭಾಗಕ್ಕೆ 3 ಕೋವಿಡ ಆರೈಕೆ ಕೇಂದ್ರ : ಅಶೋಕ್ ನಾಯ್ಕ”
Comments are closed.
[…] […]