ದಿನಾಂಕ 26.8.2021 ರಂದು ಬೆಳಗ್ಗೆ 11.00 ಗಂಟೆಗೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಹಾಗೂ ಗ್ರಾಮಗಳಲ್ಲಿ 94 ಸಿ, 94 ಸಿ ಸಿ ಹಾಗೂ 94 ಡಿ ಅರ್ಜಿಗಳಲ್ಲಿ ಮಂಜೂರು ಮಾಡಿರುವ ಹಾಗೂ ಮಂಜೂರು ಮಾಡುವ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯ ಅಧಕ್ಷತೆಯನ್ನು ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿಅಶೋಕನಾಯ್ಕ ರವರು ವಹಿಸಿದ್ದರು. ಸಭೆಯಲ್ಲಿ ಶಾಸಕರು ಮಾತನಾಡುತ್ತ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿನ ಎಲ್ಲಾ ಗ್ರಾಮಗಳಲ್ಲಿ ದಾಖಲೆರಹಿತ ವಸತಿಗಳಿಗೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ದಾಖಲೆ ರಹಿತ ಜನವಸಗಳಿಗೆ ಹಕ್ಕು ಪತ್ರವನ್ನೂ ನೀಡಲಾಗುವುದು ಎಂದು ತಿಳಿಸಿದರು ಮೊದಲನೇಯ ದಾಗಿ ಶಿವಮೊಗ್ಗ ತಾಲ್ಲೂಕಿನ ಅಯನೂರು ಗ್ರಾಮ ಪಂಚಾಯತಿಯ ವೀರಣ್ಣನ ಬೆನವಳ್ಳಿ ಗ್ರಾಮವನ್ನು ಹಾಗೂ ಭದ್ರಾವತಿ ತಾಲ್ಲೂಕಿನ ಗುಡುಮಘಟ್ಟ ಗ್ರಾಮ ಪಂಚಾಯತಿ ಮಲ್ಲಿಗೆನಹಳ್ಳಿ ಹಾಗೂ ತಡಸ ಗ್ರಾಮಗಳನ್ನು ಪೈಲೆಟ್ ಯೋಜನೆಯಾಗಿ ತೆಗೆದುಕೊಂಡು ಹಕ್ಕು ಪತ್ರ ವಿತರಿಸಲು ಕ್ರಮ ವಹಿಸಲು ತಹಶಿಲ್ದಾರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು. ಈ ಸಭೆಯಲ್ಲಿ ಉಪ ವಿಭಾಗಾಧಿಕಾರಿಗಳು, ಶಿವಮೊಗ್ಗ ಮತ್ತು ಭದ್ರವತಿ ತಹಶಿಲ್ದಾರರು, ಕಾರ್ಯನಿರ್ವಹಣಾಧಿಕಾರಿಗಳು, ADLR, RI, PDO, VA ಗಳು ಹಾಜರಿದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153