ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ನೆಹರು ಕ್ರೀಡಾಂಗಣದ ವ್ಯಾಯಾಮ ಶಾಲೆಯು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು ಸದರಿ ವ್ಯಾಯಾಮಶಾಲೆಯ ಶೌಚಾಲಯಗಳಲ್ಲಿ ಅದರ ಬಾಗಿಲಿಗೆ ಚಿಲಕ ಸಹ ಇರುವುದಿಲ್ಲ ಮತ್ತು ವ್ಯಾಯಾಮ ಕಲಿಕೆಗೆ ಬರುವ ವಿದ್ಯಾರ್ಥಿಗಳು ಹಾಗೂ ಕೂಲಿ ಕಾರ್ಮಿಕರಿಗೆ, ಮಧ್ಯವಯಸ್ಕರು , ಆಸಕ್ತರು ಪುರುಷರು ಹಾಗೂ ಮಹಿಳೆಯರು ಬಂದರೂ ಇವರೆಲ್ಲರಿಗೂ ವ್ಯಾಯಾಮ ಮಾಡುವ ಸಾಮಗ್ರಿಗಳ ಕೊರತೆ ಕಂಡು ಬಂದಿದ್ದು ತುಂಬಾ ಹಳೆಯ ಹಾಳಾದ ಸಾಮಗ್ರಿಗಳು ಕಂಡುಬರುವ ವೈಟ್ ಲಿಫ್ಟಿಂಗ್ ಪವರ್ ಲಿಫ್ಟಿಂಗ್ ಅಭ್ಯಾಸ ಮಾಡುವವರಿಗೆ ಸಾಮಗ್ರಿಗಳ ಸಂಪೂರ್ಣ ಕೊರತೆಯುಂಟಾಗಿದೆ. ವ್ಯಾಯಾಮ ಅಭ್ಯಾಸ ಮಾಡಲು ಬರುವ ಹೆಣ್ಣು ಮಕ್ಕಳಿಗೆ ಬಟ್ಟೆ ಬದಲಿಸಲು ಸಹ ಇಲ್ಲವಾಗಿದೆ. ಸದರಿ ವ್ಯಾಯಾಮ ಶಾಲೆಯ ಮೇಲ್ಛಾವಣಿ ಸಹ ಮಳೆ ಬಂದು ಸೇರುತ್ತವೆ. ಒಳಗಡೆ ನೀರು ನಿಂತು ಉಂಟಾಗುತ್ತದೆ.ಈ ವಿಷಯವನ್ನು ಇಲ್ಲಿರುವ ಯುವ ಸಬಲೀಕರಣ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ .ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಸದರಿ ವ್ಯಾಯಾಮ ಶಾಲೆಗೆ ಖುದ್ದು ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಶಿವಮೊಗ್ಗ ನಗರದ ವ್ಯಾಯಾಮಶಾಲೆಯಲ್ಲಿ ಅಭಿವೃದ್ದಿ ಪಡಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ತಮ್ಮ ಕಚೇರಿಯ ಬಳಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ಧರಣಿ ಹಮ್ಮಿಕೊಳ್ಳಲಾಗುವುದು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153