ಎಲ್ಲರಿಗೂ ಮಾದರಿಯಾಗಿರುವ ಆಗುಂಬೆ ವಲಯದ ಪೊಲೀಸರು ಕಳ್ಳತನ, ಅಕ್ರಮ ಮದ್ಯ ತಯಾರಿಕೆ, ಅತ್ಯಾಚಾರ, ಕೊಲೆ, ಸುಲಿಗೆಯ ಅಪರಾಧಿಗಳಿಗೆ ಶಿಕ್ಷೆ ನೀಡಿದ್ದು ಮಲೆನಾಡಿಗರು ನಿಟ್ಟುಸಿರು ಬಿಡುವಂತೆ ತಮ್ಮ ಜೀವದ ಹಂಗು ತೊರೆದು ಕಾಯುತ್ತಿದ್ದಾರೆ. ಅಧಿಕಾರಿಗಳಾದ ಎಸ್. ಐ ಶಿವಕುಮಾರ್ ಹಾಗೂ ಅವರ ತಂಡದವರಾದ ಅನಿಲ್, ಉಮೇಶ್, ವೀರೇಂದ್ರ,ಗಣೇಶ್,ಉಲ್ಲಾಸ್ ಸುದರ್ಶನ್ ಇನ್ನು ಮುಂತಾದವರಿಗೆ ಸ್ಥಳೀಯರ ಮೂಲಕ ಅಭಿನಂದನೆ ತಿಳಿಸಿದ್ದಾರೆ. ಕೇರಳ ಮೂಲದ ಕಾರು ಬಳಸಿದ್ದ ಮಂಗಳೂರು ಮೂಲದ ಪ್ರಯಾಣಿಕರನ್ನು ಚೆಕ್ ಪೋಸ್ಟ್ ನಲ್ಲಿ ತಡೆದು ಕೊರೋನಾ ಸಮಯವಾದ್ದರಿಂದ ಟೆಸ್ಟ್ ಗೆ ಒಳಪಡಿಸಿ ನಂತರ ಕಳುಹಿಸಿದ್ದಾರೆ. ಒಂದೊಮ್ಮೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ಸಮಾಜದ ಹಿತ ದೃಷ್ಟಿ ಕಾಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ದನ ಕಳ್ಳತನ ಕೂಡಾ ನಿಯಂತ್ರಣ ಕ್ಕೆ ಬಂದಿದೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153