ಕರ್ನಾಟಕದ ಕೆಲವು ನಗರಗಳು ಶರವೇಗದಿಂದ ಬೆಳೆಯುತ್ತಿವೆ. ಇದರಲ್ಲಿ ಶಿವಮೊಗ್ಗ ನಗರವೂ ಸಹ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದಿನೇದಿನೇ ಜನಸಂದಣಿ ಹೆಚ್ಚಾಗಿ ಜನ ವಸತಿಯ ಸಮಸ್ಯೆ ತೀವ್ರಗೊಂಡಿರುವ ವುದನ್ನು ಮನಗಂಡ ಹಿಂದಿನ ಸರ್ಕಾರವು ಶಿವಮೊಗ್ಗ ನಗರದ ಗೋಪಿಶೆಟ್ಟಿ ಕೊಪ್ಪ ಗ್ರಾಮದ ಒಟ್ಟು ಹತ್ತೊಂಬತ್ತು ಎಕರೆ ಇಪ್ಪತ್ತು ಗುಂಟೆ ಜಮೀನಿನಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಬೆಂಗಳೂರು ಇವರ ಆದೇಶ ಸಂಖ್ಯೆ ಎಫ್ ಡಿ ಆರ್ ಜಿ ಆರ್ ಹೆಚ್ ಸಿ ಎಲ್ 04 ಹೆಚ್ ಎಸ್ 36-2012/7431 ದಿನಾಂಕ 26-12-2012 ರಂತೆ ಶಿವಮೊಗ್ಗ ನಗರ ಆಶ್ರಯ ಸಮಿತಿ ತೀರ್ಮಾನದಂತೆ ಜಿ+2 ಮಾದರಿಯ ಮನೆಗಳನ್ನು ಶಿವಮೊಗ್ಗ ನಗರದ ನಿವೇಶನ ರಹಿತರಿಗೆ ಹಂಚುವ ಸಲುವಾಗಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿರುವುದು ಸರಿಯಷ್ಟೆ. ಆದರೆ ಸುಮಾರು ಒಂದೂವರೆ ವರ್ಷಗಳಿಂದ ಕೊರೋನಾ ಎಂಬ ಮಹಾಮಾರಿ ಕಾಯಿಲೆ ಯಿಂದ ಲಾಕ್ ಡೌನ್ ಆಗಿ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಕೂಲಿಕಾರ್ಮಿಕರು ಮಹಿಳೆಯರು ಅಂಗವಿಕಲರು ಮತ್ತು ಬಡವರ ಜೀವನವನ್ನು ಸಾಗಿಸುವುದು ಕಷ್ಟ ಸಾಧ್ಯವಾಗಿದೆ ಇಂತಹ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಶ್ರಯ ಸಮಿತಿ ಮಾದರಿಯ ಮನೆಯಲ್ಲಿ ಆಯ್ಕೆಗೊಂಡ ಫಲಾನುಭವಿಗಳಿಗೆ ಸೆಪ್ಟೆಂಬರ್ 30ರ ಒಳಗೆ ನಿಗದಿತ ಶುಲ್ಕವನ್ನು ಪಾವತಿಸಲು ಗಡುವು ನೀಡುತ್ತದೆ. ಪಾಲಿಕೆಯ ಶೇಕಡಾ 22.75% ರ ನಿಧಿಯ ಹಣವನ್ನು ಎಸ್ ಸಿ ಎಸ್ ಟಿ ಜನಾಂಗದ ಕೇರಿ ಬಡಾವಣೆ ಅಥವಾ ಅಭಿವೃದ್ಧಿಗಾಗಿ ಬಳಸದೆ ಬೇರೆ ಕಾಮಗಾರಿಗೆ ಬಳಸಿ ದುರುಪಯೋಗ ಮಾಡಿಕೊಂಡು ಹೋಗುವುದೇ ಹೆಚ್ಚು ಕಂಡುಬರುತ್ತದೆ. ಕೊರೋನಾ ಮಹಾಮಾರಿ ಕಾಯಿಲೆಯಿಂದ ನೊಂದಿರುವ ಬಡ ದಲಿತ ಫಲಾನುಭವಿಗಳ ಒಟ್ಟು ಶುಲ್ಕದಲ್ಲಿ ಶೇಕಡಾ 24.75 ನಿಧಿಯಿಂದ ಭರಿಸುವುದು ಹಾಗೂ ಇತರೆ ವರ್ಗದವರಿಗೆ ನಿಗದಿತ ಶುಲ್ಕವನ್ನು ಪಾವತಿಸಲು 1ವರ್ಷ ಕಾಲ ಅವಕಾಶ ಮಾಡಿಕೊಡಬೇಕೆಂದು ಸಮಿತಿಯು ಪ್ರತಿಭಟನಾ ಧರಣಿ ಮಾಡುವುದರ ಮೂಲಕ ಜಿಲ್ಲಾ ಆಡಳಿತವನ್ನು ಒತ್ತಾಯಿಸುತ್ತದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ