ಸಂಯುಕ್ತ ಕಿಸಾನ್ ಮೋರ್ಚಾ ರೈತ ಹೋರಾಟ ಸಮಿತಿ ಕೇಂದ್ರ ಸರ್ಕಾರ ತಂದಿರುವ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ಶಾಸನ ಬದ್ದಗೊಳಿಸಲು ಒತ್ತಾಯಿಸಿ ದೆಹಲಿ ಸಿಂಗ್, ಟಿಕ್ರಿ, ಗಾಜಿಪೂರ ಗಡಿಗಳಲ್ಲಿ ಕಳೆದ ನವೆಂಬರ್ 26ರಿಂದ ಚಳುವಳಿ ನಡೆಸುತ್ತಿದ್ದು ಇವತ್ತಿಗೆ 6ತಿಂಗಳ ತುಂಬಿದೆ. ಕೇಂದ್ರ ಸರ್ಕಾರ ರೈತ ಮುಖಂಡರನ್ನು ಕರೆದು ಮಾತನಾಡಿಸುವ ಸೌಜನ್ಯ ಕೂಡ ತೋರಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ದೇಶಾದ್ಯಂತ ರೈತರು ಸಾರ್ವಜನಿಕರು ಕರಾಳ ದಿನಾಚರಣೆ ಆಚರಣೆ ಮಾಡಲು ಕರೆ ಕೊಟ್ಟಿತ್ತು.
ಸಂಯುಕ್ತ ಕಿಸಾನ್ ಮೋರ್ಚಾದ ಕರೆ ಬೆಂಬಲಿಸಿರುವ ಎನ್‍ಎಸ್‍ಯುಐ ಇಲ್ಲಿನ ಹಳೇ ಪೋಸ್ಟ್ ಆಫೀಸ್ ರಸ್ತೆಯಲ್ಲಿರುವ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಸ್. ಬಾಲಾಜಿ ಅವರ ನಿವಾಸದೆದುರು ಕಪ್ಪು ಬಾವುಟ ಹಾರಿಸಿ ಧರಣಿ ನಡೆಸಿದ ಪ್ರತಿಭಭಟನಾಕಾರರು ರೈತರ ಪ್ರತಿಭಟನೆಗೆ 6 ತಿಂಗಳು ಸಂದ ಹಿನ್ನೆಲೆಯಲ್ಲಿ ಇಂದು ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಧರಣಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸೂಡಾ ಅಧ್ಯಕ್ಷ ಎನ್. ರಮೇಶ್, ರೈತರು ಅನ್ನ ನೀರು ಬಿಟ್ಟು 6 ತಿಂಗಳಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.  ಕೇಂದ್ರ ಕೃಷಿ ಕಾಯ್ದೆಗಳಿಂದ ರೈತರು ಬೀದಿಪಾಲಾಗುತ್ತಾರೆ. ಆದರೆ, ಸರ್ಕಾರ ರೈತರ ಆಗ್ರಹಕ್ಕೆ ಬೆಲೆ ಕೊಡುತ್ತಿಲ್ಲ ಎಂದು ದೂರಿದರು.
ಕೇಂದ್ರ ಸರ್ಕಾರ MSP ಕನಿಷ್ಟ ಬೆಂಬಲ ಬೆಲೆ ಹಿಂದು ಇತ್ತು, ಈಗಲೂ ಇದೆ, ಮುಂದೆಯು ಇರುತ್ತದೆ ಎಂದು ಹೇಳುತ್ತದೆ. ಹಾಗಾದರೆ ಕರ್ನಾಟಕದಲ್ಲಿ ಬೆಳೆದಿರುವ ಭತ್ತ,ರಾಗಿ,ಜೋಳ ಇತರೆ ಬೆಳೆಗಳು ಲಾಕ್ ಡೌನ್ ಯಿಂದ ಕೇಳುವವರೇ ಇಲ್ಲದಂತಾಗಿದೆ. ಇಂತ ಸಂದರ್ಭದಲ್ಲಿಯೂ ಸಹ ಯಾಕೆ ಒSP ಬೆಲೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಖರೀದಿ ಮಾಡುತ್ತಿಲ್ಲ ಅಲ್ಲದೇ ಬೆಳೆದ ಹೂ, ಹಣ್ಣು, ತರಕಾರಿ, ರೇಷ್ಮೆ ಇತರ ಬೆಳೆಗಳು ಜಮೀನಿನಲ್ಲೇ ಕೊಳೆತು ನಾಶವಾಗಿದೆ. ಈ ಲಾಕ್ ಡೌನ್ ಸಂಧರ್ಭದಲ್ಲಿ ಅಂಕಿ ಅಂಶಗಳ ಪ್ರಕಾರ ಈ ಬೆಳೆಗಳು 100ಕ್ಕೆ 25% ಮಾತ್ರ ಮಾರಾಟವಾಗಿದೆ. ಆದರೂ ಸರ್ಕಾರ ಎಕರೆಗೆ 4000/-ರೂ. ಪರಿಹಾರ ಘೋಷಣೆ ಮಾಡಿರುವುದು ರೈತರಿಗೆ ಅವಮಾನ ಮಾಡಿದೆ. ಇದೆ ಕೋವಿಡ್ ಸಂಧರ್ಭದಲ್ಲಿ ಆದಾನಿ, ಅಂಬಾನಿಗಳ ಆದಾಯ ಒಂದು ಘಂಟೆಗೆ 20ಕೋಟಿ ರೂ. ಹೆಚ್ಚಿಗೆ ಆಗಿದೆ. ಇನ್ನೊಂದು ಕಡೆ 1ಘಂಟೆಗೆ 20000 ಜನ ನಿರುದ್ಯೋಗಿಗಳಾಗುತ್ತಿದ್ದಾರೆ.

ಕೇಂದ್ರ ಸರ್ಕಾರ ಹಠಮಾರಿ ಧೋರಣೆ ಅನುಸರಿಸಿದ ಪರಿಣಾಮ ಹಿಂದೆ ನಡೆದ 5ರಾಜ್ಯ ಮತ್ತು ಮೊನ್ನೆ ನಡೆದ 5ರಾಜ್ಯ ಚುನಾವಣೆಯಲ್ಲಿ ರೈತರು ಬುದ್ದಿ ಕಲಿಸಿದ್ದಾರೆ. ಇನ್ನಾದರೂ ಬುದ್ದಿ ಕಲಿತು ಎಚ್ಚೆತುಕೊಂಡು ಚಳುವಳಿ ನಡೆಸುತ್ತಿರುವ ರೈತ ಮುಖಂಡರ ಜೊತೆ ಮಾತುಕತೆ ನಡೆಸಿ ಕಾಯ್ದೆಗಳನ್ನು ವಾಪಾಸ್ಸು ಪಡೆದು ಬೆಂಬಲ ಬೆಲೆ ನೀತಿಯನ್ನು ಶಾಸನ ಬದ್ದಗೊಳಿಸಬೇಕೆಂದು ಆಗ್ರಹಿಸಿದರು.
ಇನ್ನು ಈಗಾಗಲೇ ಕೋವಿಡ್ ಲಾಕ್‍ಡೌನ್‍ನಿಂದ ರೈತರು ಕಂಗಾಲಾಗಿದ್ದಾರೆ. ನಿರೀಕ್ಷಿತ ಮಟ್ಟದಲ್ಲಿ ಬೆಳೆ ಬೆಳೆಯಲಾಗುತ್ತಿಲ್ಲ. ಇಂತಹ ಸಂದರ್ಭದಲ್ಲೇ ರಸಗೊಬ್ಬರದ ಬೆಲೆ ಏರಿಕೆ ಮಾಡಲಾಗಿದೆ. ಇದು ಕೇಂದ್ರ ಸರ್ಕಾರ ರೈತರ ವಿರೋಧಿ ಎನ್ನುವುದನ್ನು ಸಾಬೀತು ಪಡಿಸುತ್ತದೆ ಎಂದು ತಿಳಿಸಿದರು.
ಕೂಡಲೇ ಕೇಂದ್ರ ಸರ್ಕಾರ ರೂಪಿಸಿರುವ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ರಸಗೊಬ್ಬರ ಬೆಲೆ ಇಳಿಕೆ ಮಾಡುವ ಮೂಲಕ ರೈತರಿಗೆ ನೆರವಾಗಬೇಕು ಎಂದರಲ್ಲದೆ, ರಸಗೊಬ್ಬರ ಬೆಲೆ ಇಳಿಕೆ ಮಾಡದಿದ್ದಲ್ಲಿ ತೀವ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಸಿ.ಜಿ. ಮಧುಸೂದನ್, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಕೆ. ಚೇತನ್, ಎನ್.ಎಸ್.ಯು.ಐ. ಜಿಲ್ಲಾದ್ಯಕ್ಷ ಹೆಚ್.ಎಸ್. ಬಾಲಾಜಿ, ನಗರಾಧ್ಯಕ್ಷ ವಿಜಯ್, ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಮೊಹಮ್ಮದ್ ನಿಹಾಲ್,  ಯುವ ಕಾಂಗ್ರೆಸ್ ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಅಧ್ಯಕ್ಷ ವಿನಯ್, ಉತ್ತರ ಬ್ಲಾಕ್  ಗಿರೀಶ್, ಪ್ರಮುಖರಾದ ಚಂದ್ರೋಜಿರಾವ್, ಅಬ್ದುಲ್ಲಾ ಪಾಲ್ಗೊಂಡಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ