ನಗರದ ಸ್ಮಾರ್ಟ್ ಸಿಟಿ ಕಳಪೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಶಿವಮೊಗ್ಗಾದ ಅತ್ಯುತ್ತಮ ಶಿಕ್ಷಕನನ್ನು ಶಿವಮೊಗ್ಗ ನಗರದ ಜನತೆ ಹಾಗೂ ವಿದ್ಯಾರ್ಥಿಗಳು ಕಳೆದುಕೊಂಡಿದ್ದಾರೆ. ಶನಿವಾರ ವಿನೋಬಾನಗರದ 100 ಅಡಿ ರಸ್ತೆಯ SBI ಬ್ಯಾಂಕಿನ ಎದುರು ಚಲಿಸುತ್ತಿದ್ದ ಟ್ರಕ್ಕಿಗೆ ಡಿಕ್ಕಿ ಹೊಡೆದು ಶ್ರೀಯುತ ರಂಗನಾಥ್ ಎಂಬ ಶಿಕ್ಷಕರು ಸಾವನ್ನಪ್ಪಿದ್ದಾರೆ. ಈ ಸಾವಿಗೆ ನೇರ ಕಾರಣ ಸುಮಾರು 2ತಿಂಗಳಿಂದ ರಸ್ತೆ ಕಾಮಗಾರಿ ಚಾಲ್ತಿಯಲ್ಲಿದ್ದು ಅರ್ಧ ಬರ್ಧ ರಸ್ತೆ ಕಾಮಗಾರಿ ಆಗಿರುವುದರಿಂದ ನಮ್ಮ ನಗರದ ಒಬ್ಬ ನಾಗರಿಕರು ಜೀವ ತೆತ್ತಿದ್ದಾರೆ .ಸಾರ್ವಜನಿಕ ಅಭಿಪ್ರಾಯದ ಪ್ರಕಾರ ಹಾಗೂ ಕಾಂಗ್ರೆಸ್ ನ ಎಲ್ಲಾ ಸದಸ್ಯರು ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಮನವರಿಕೆಯಾದ ಸಂಗತಿಯೆಂದರೆ ಇಲ್ಲಿನ ಸ್ಮಾರ್ಟ್ ಸಿಟಿ ಕಾಮಗಾರಿ ಅನೇಕ ದಿನಗಳಿಂದ ಕುಂಠಿತ ಗತಿಯಲ್ಲಿ ಸಾಗುತ್ತಿದ್ದು ಇಲ್ಲಿನ ನಾಗರಿಕರಿಗೆ ತುಂಬಾ ತೊಂದರೆಯಾಗಿದೆ ಈ ಕಾಮಗಾರಿಯು ಫೆಬ್ರವರಿ 2021 ಹಿಂದೆ ಮುಗಿಯಬೇಕಾಗಿತ್ತು ಆದರೆ ಕೊರೋನಾ ನೆಪದಲ್ಲಿ ಮಾರ್ಚ್ 2022 ರ ತನಕ ಕಾಮಗಾರಿ ಪೂರ್ಣಗೊಳಿಸುವ ಅವಧಿಯನ್ನು ವಿಸ್ತರಿಸಲಾಗಿದೆ. 2 ವರ್ಷಗಳಿಂದ ಈ ಕಾಮಗಾರಿಯನ್ನು ಮುಗಿಸಲು ಇವರಿಗೆ ಸಾಧ್ಯವಾಗದಿರುವುದು ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ ಶಿವಮೊಗ್ಗ ಸ್ಮಾರ್ಟ್ ಸಿಟಿ ಗೆ ಈ 1ದುರ್ಘಟನೆಯೇ ಕಪ್ಪುಚುಕ್ಕಿಯಾಗಿ ಕೊನೆವರೆಗೂ ಉಳಿಯುತ್ತದೆ ಆದ್ದರಿಂದ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಇನ್ಮುಂದೆ ಈ ರೀತಿ ಅವೈಜ್ಞಾನಿಕ ಕಾಮಗಾರಿಗಳು ಆಗದೆ ಇರುವ ರೀತಿ ಎಚ್ಚರಿಕೆ ನೀಡಲಾಗಿದೆ.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಶ್ರೀಮತಿ ಯಮುನಾ ರಂಗೇಗೌಡ ಎಚ್ ಸಿ ಯೋಗೇಶ್ ರೇಖಾ ರಂಗನಾಥ್ ಶಮೀರ್ ಖಾನ್ ಮುಖಂಡರಾದ ರಂಗನಾಥ್ ಕೆ ರಂಗೇಗೌಡರು ಪ್ರಭಾಕರ್ ಗೌಡ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ