ಶಿವಮೊಗ್ಗ ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಮತ್ತು ಅಪೀಣ೯ ಕಾಮಗಾರಿಯಿಂದ ಶನಿವಾರ ಆಗಸ್ಟ್ 28 ರಂದು ಅಮಾಯಕ ಶಿಕ್ಷಕರೊಬ್ಬರು ಜೀವ ಕಳೆದುಕೊಂಡಿದ್ದಾರೆ. ಈ ಮೊದಲಿನಿಂದಲೂ ನಾಗರಿಕರು ಸ್ಮಾರ್ಟ್ ಸಿಟಿಯ ನಿಧಾನಗತಿಯ ಮತ್ತು ಕಳಪೆ ಕಾಮಗಾರಿ ಬಗ್ಗೆ ಧ್ವನಿ ಎತ್ತುತ್ತಲೇ ಬಂದಿದ್ದಾರೆ ಆದರೆ ಇದರ ಬಗ್ಗೆ ಪಾಲಿಕೆಯಾಗಲೀ ಜಿಲ್ಲಾಡಳಿತವಾಗಲಿ ಉಸ್ತುವಾರಿ ಸಚಿವರಾಗಲಿ ಗಮನ ಹರಿಸಿದಿರುವುದು ನಿಜಕ್ಕೂ ವಿಷಾದನೀಯ.ಈಗಾಗಲೇ ನಗರದ ಮುಖ್ಯ ರಸ್ತೆಯನ್ನು ದ್ವಿಪಥ ರಸ್ತೆ 2ವರ್ಷದಿಂದ ಅಗೆದು ಹಾಕಿ ಜನರಿಗೆ ತೊಂದರೆಯಾಗುವಂತೆ ಮಾಡಲಾಗಿದೆ ಎಂಜಿನಿಯರ್ ಮತ್ತು ಗುತ್ತಿಗೆದಾರರು ನೆನಪಾದಾಗ ಬಂದು ಅರೆಬರೆ ಕೆಲಸ ಮಾಡುತ್ತಾ ವಾಹನ ಸಂಚಾರರಿಗೆ ಮುಳುವಾಗಿದ್ದಾರೆ.

ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
ಬಸವರಾಜ್ ಕರವೇ ತಾಲ್ಲೂಕು ಅಧ್ಯಕ್ಷ ರು ಶಿವಮೊಗ್ಗ

ಶನಿವಾರ ಗೋಪಾಳದ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ರಂಗನಾಥ್ ಎನ್ನುವವರು ರಸ್ತೆಯ ಅವೈಜ್ಞಾನಿಕ ಕೆಲಸಕ್ಕೆ ಬಲಿಯಾಗಿದ್ದಾರೆ ಸ್ಮಾರ್ಟ್ ಸಿಟಿ ಪಡೆದ ಬಲಿಯಾಗಿದೆ. ಇದಕ್ಕೆ ಕಾರಣವಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಇಂಜಿನಿಯರ್ ಅವರನ್ನು ಅಮಾನತು ಮಾಡಬೇಕು ಗುತ್ತಿಗೆದಾರರು ಸರಿಯಾಗಿ ಕೆಲಸ ನಿರ್ವಹಿಸದ ಕಾರಣ ನಿಗದಿತ ಸಮಯದಲ್ಲಿ ಮುಗಿಸದಿರುವುದರಿಂದ ತವರಲ್ಲೇ ಕಪ್ಪುಪಟ್ಟಿಗೆ ಸೇರಿಸಬೇಕು ಎನ್ನುವುದು ನಮ್ಮ ಸಂಘಟನೆಯ ಆಗ್ರಹವಾಗಿದೆ. ಇದರ ಜತೆಗೆ ಮೃತ ಶಿಕ್ಷಕನ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರವನ್ನು ಕಟ್ಟಿಕೊಡಬೇಕು ಮೃತ ಶಿಕ್ಷಕರ ಪತ್ನಿಗೆ ಸರಕಾರಿ ಕೆಲಸ ಕೊಡಬೇಕು. ಸ್ಮಾರ್ಟ್ ಸಿಟಿಯ ಅಥವಾ ಕಾಲದ ಕೆಲಸದ ಸಂಬಂಧ ಸಭೆ ಕರೆದು ಕೆಲಸ ಕೆಲಸ ವಹಿಸಲು ಸೂಚಿಸಬೇಕು ನಗರದ ಎಲ್ಲ ವಾರ್ಡ್ ಗಳಲ್ಲಿ ಕಾಮಗಾರಿಯಿಂದ ಜನರಿಗೆ ತೊಂದರೆಯಾಗಿದೆ ಕೂಡಲೇ ಮುಗಿಸಲು ಸೂಚಿಸಬೇಕು ಮಳೆಯಿಂದ ಊರೆಲ್ಲಾ ಕೆಸರುಗದ್ದೆಯಾಗಿದೆ ಸ್ಮಾರ್ಟ್ ಸಿಟಿ ಅವರಿಗೆ ಕೂಡಲೇ ಎಚ್ಚರಿಕೆ ನೀಡಿ ಸುಗಮ ಮತ್ತು ಉತ್ತಮ ಕಾರ್ಯನಿರ್ವಹಣೆಗೆ ಸೂಚಿಸಬೇಕು ಎಂದು ಒತ್ತಾಯಿಸುತ್ತೇವೆ. ಮುಂದಿನ ದಿನಗಳಲ್ಲಿ ಎಚ್ಚೆತ್ತು ಕೆಲಸ ಮಾಡದಿದ್ದಲ್ಲಿ ಸ್ಮಾರ್ಟ್ ಸಿಟಿ ಕಚೇರಿ ಎದುರು ಧರಣಿ ಹೂಡಬೇಕಾಗುತ್ತದೆ ಎಂದು ಎಚ್ಚರಿಸಿದ್ದೇವೆ.