ನಗರದ ಎಲ್ಲ ರೋಟರಿ ಸಂಸ್ಥೆಗಳಿದ 8 ಎಕರೆ ಜಾಗದಲ್ಲಿ ರೋಟರಿ ಪರಿಸರ ಸ್ನೇಹಿ ವನ ನಿರ್ಮಾಣ ಮಾಡಲು ಮುಂದಾಗಿರುವುದು ಅಭಿನಂದನೀಯ ಕಾರ್ಯ ಎಂದು ರೋಟರಿ ಜಿಲ್ಲಾ ಗವರ್ನರ್ ಎಂ.ಜಿ.ರಾಮಚದ್ರಮೂರ್ತಿ ಹೇಳಿದರು.
ಶಿವಮೊಗ್ಗ ನಗರದ ಸಾಗರ ರಸ್ತೆಯ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯ ಎರಡು ಬದಿಯಲ್ಲಿ ಶಿವಮೊಗ್ಗದ ಎಲ್ಲ ರೋಟರಿ ಕ್ಲಬ್ ಹಾಗೂ ಇನ್ನರ್‌ವ್ಹೀಲ್ ಕ್ಲಬ್‌ಗಳ ಸಹಯೋಗದಲ್ಲಿ ನಿರ್ಮಾಣ ಮಾಡುತ್ತಿರುವ ಪರಿಸರ ಸ್ನೇಹಿ ವನ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿ, ಸಮಾಜದ ಪ್ರತಿಯೊಬ್ಬರು ಪರಿಸರ ಉಳಿಸಿ ಬೆಳೆಸುವ ಕಾರ್ಯವನ್ನು ನಿರಂತರವಾಗಿ ಮಾಡಬೇಕು ಎಂದು ತಿಳಿಸಿದರು.
ಶಿವಮೊಗ್ಗ ನಗರ ಮಿತಿಯಲ್ಲಿ ಲಭ್ಯವಿರುವ ಸರ್ಕಾರಿ ಜಾಗದ ಒತ್ತುವರಿ ತಡೆಯಲು ಹಾಗೂ ಪರಿಸರ ಸಂರಕ್ಷಿಸಿ ಉತ್ತಮ ವಾತಾವರಣ ರೂಪಿಸುವ ದೃಷ್ಠಿಯಿಂದ ರೋಟರಿ ಸಂಸ್ಥೆಗಳ ವತಿಯಿಂದ ಪರಿಸರ ಸ್ನೇಹಿ ವನ ನಿರ್ಮಾಣ ಮಾಡಲಾಗುತ್ತದೆ. ಹಾಸನ, ಚಿಕ್ಕಮಗಳೂರು, ಉಡುಪಿ ಹಾಗೂ ಶಿವಮೊಗ್ಗದ 84 ರೋಟರಿ ಕ್ಲಬ್‌ಗಳಲ್ಲಿ ಸಹ ಪರಿಸರ ಸ್ನೇಹಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಯೋಜನೆಯು ಈ ವರ್ಷದಿಂದ ನಿರಂತರವಾಗಿ ಮುಂದಿನ ವರ್ಷಗಳಲ್ಲಿ ಜಾರಿಯಲ್ಲಿರುತ್ತದೆ. 8 ಎಕರೆ ಜಾಗದಲ್ಲಿ ಈಗಾಗಲೇ ಪರಿಸರ ಸ್ನೇಹಿಯಾಗಲು ಎಲ್ಲ ಜಾತಿಯ 900ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ಹಂತ ಹಂತವಾಗಿ ಗಿಡಗಳನ್ನು ನೆಡಲಾಗವುದು ಎಂದು ತಿಳಿಸಿದರು.
ಜಿಲ್ಲಾ ಮಾಜಿ ಗವರ್ನರ್ ಎ.ಎಸ್.ಚಂದ್ರಶೇಖರ್ ಮಾತನಾಡಿ, ಶಿವಮೊಗ್ಗ ನಗರದ ರೋಟರಿ ಸದಸ್ಯರ ದೇಣಿಗೆ ಸಂಗ್ರಹದಿದ ರೋಟರಿ ವನ ನಿರ್ಮಾಣ ಮಾಡಲಾಗುವುದು. ಪರಿಸರದಿಂದ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ ಎಂದರು.
ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಅಧ್ಯಕ್ಷೆ ಛಾಯಾ ವೀರಣ್ಣ ಅವರು 8,000 ರೂ. ದೇಣಿಗೆ ನೀಡಿದರು. ಜಿಲ್ಲಾ ಮಾಜಿ ಗವರ್ನರ್ ಜಿ.ಎನ್.ಪ್ರಕಾಶ್, ಉಮೇಶ್, ವಲಯ 10ರ ಸಹಾಯಕ ಗವರ್ನರ್ ಎಂ.ಪಿ.ಆನದಮೂರ್ತಿ, ಉಮೇಶ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ನಿವೃತ್ತ ಡಿಎಫ್‌ಒ ಮಂಜುನಾಥ್, ವಲಯ ಸೇನಾನಿ ಎ.ಎಸ್.ಗುರುರಾಜ್, ಕೆ.ಪಿ.ಶೆಟ್ಟಿ, ವಿಜಯ್ ಪ್ರಕಾಶ್, ಲಕ್ಷಿನಾರಾಯಣ, ವೀರಣ್ಣ ಪ್ರತಾಪ್, ಕುಮಾರ್, ರಾಜಶೇಖರ್, ಶ್ರೀರಂಜನಿ ದತ್ತಾತ್ರಿ ಉಪಸ್ಥಿತರಿದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ