ಶಿವಮೊಗ್ಗ ತಾಲ್ಲೂಕು ನಿದಿಗೆ ಹೋಬಳಿಯ ಲಕ್ಕಿನಕೊಪ್ಪ ಗ್ರಾಮದ ಸರ್ವೆ ನಂ.25 ರಲ್ಲಿ ಒಟ್ಟು 20-00 ಎಕರೆ ಜಮೀನು ಮೇಲ್ಕಂಡ ಸಂಘದ ಹೆಸರಿಗೆ ಮಂಜೂರು ಆಗಿದ್ದು ,ಸಂಘದ ಬಡ ನಿವೇಶನ ರಹಿತ ಸದಸ್ಯರಿಗೆ ತಲಾ ಒಬ್ಬರಿಗೆ ವಿಸ್ತೀರ್ಣ 30*40ಅಡಿಗಳಂತೆ ರೇಶನ ಹಂಚಿಕೆಯಾಗಿರುತ್ತದೆ ಸದರಿ ನಿವೇಶನ ಗಳಿಗೆ ಸಂಬಂಧಪಟ್ಟಂತೆ 518ಪಟ್ಟಾಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಿರುತ್ತಾರೆ. ಸದರಿ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡಿರುತ್ತಾರೆ. ಸದರಿ ನಿವೇಶನಗಳ ಫಲಾನುಭವಿಗಳಿಗೆ ಪಹಣಿ ಮತ್ತು ಮ್ಯುಟೇಷನ್ ನಲ್ಲಿ ಕಂದಾಯ ಜಮೀನು ಆಗಿತ್ತು , ಸದರಿ ಜಮೀನಿಗೆ ಸಂಬಂಧಪಟ್ಟಂತೆ 4 ಬಾರಿ ಜಂಟಿ ಸರ್ವೆ ಪೋಡಿ ದುರಸ್ತಿ ಹಾಗೂ 4ಸಲ ಬೋರ್ಡ್ ಹಾಕಿಸಿರುವ ಒಟ್ಟು ಹಣ ರೂ 12.84.000 ಗಳಲ್ಲೂ ಪಂಚಾಯಿತಿಯಿಂದ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹೆಸರಿಗೇ ಜಮಾ ಮಾಡಬೇಕಾಗಿದೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಹಾಗೂ ಸದರಿ ಮನೆಗಳಿಗೆ ಹಕ್ಕುಪತ್ರ ನೀಡಬೇಕಾಗಿ ಹಾಗೂ ಸದರಿ ಜಾಗವನ್ನು ಸಂಘದ ಹೆಸರಿಗೆ ಖಾತೆ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಂಡರು ಖಾತೆ ಮಾಡಿಕೊಡದೆ ಹಣವನ್ನು ಕೊಡದೆ ತಮಗೆ ಸತಾಯಿಸುತ್ತಿರುವ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರವಾಗಿ ಹಾಗೂ ಕೂಡಲೇ ಹಕ್ಕುಪತ್ರ ನೀಡುವಂತೆ ತಮ್ಮ ಕಚೇರಿ ಮುಂದೆ ದಿನಾಂಕ 02-09-2021 ರಂದು ಬೆಳಿಗ್ಗೆ 10 ಗಂಟೆಯಿಂದ ಹಕ್ಕುಪತ್ರ ನೀಡುವವರೆಗೂ ಸತ್ಯಾಗ್ರಹ ಮಾಡುತ್ತೇವೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ